ADVERTISEMENT

ಅನ್ನಪೂರ್ಣೇಶ್ವರಿ ದೇಗುಲದ 5ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 16:11 IST
Last Updated 17 ಆಗಸ್ಟ್ 2021, 16:11 IST
ಹಾವೇರಿಯ ಬಸವೇಶ್ವರ ನಗರ ಮಹಿಳಾ ನಾಗರಿಕ ವೇದಿಕೆ ಆಶ್ರಯದಲ್ಲಿ ನಿರ್ಮಿಸಿರುವ ಅನ್ನಪೂಣೇಶ್ವರಿ ದೇವಸ್ಥಾನದ 5ನೇ ವಾರ್ಷಿಕೋತ್ಸವ ಸಂಭ್ರಮದಿಂದ ನೆರವೇರಿತು
ಹಾವೇರಿಯ ಬಸವೇಶ್ವರ ನಗರ ಮಹಿಳಾ ನಾಗರಿಕ ವೇದಿಕೆ ಆಶ್ರಯದಲ್ಲಿ ನಿರ್ಮಿಸಿರುವ ಅನ್ನಪೂಣೇಶ್ವರಿ ದೇವಸ್ಥಾನದ 5ನೇ ವಾರ್ಷಿಕೋತ್ಸವ ಸಂಭ್ರಮದಿಂದ ನೆರವೇರಿತು   

ಹಾವೇರಿ: ಇಲ್ಲಿಯ ಬಸವೇಶ್ವರ ನಗರ ಮಹಿಳಾ ನಾಗರಿಕ ವೇದಿಕೆ ಆಶ್ರಯದಲ್ಲಿ ಮಹಿಳೆಯರ ಸಹಕಾರದಿಂದ ನಿರ್ಮಿಸಿರುವ ಅನ್ನಪೂಣೇಶ್ವರಿ ದೇವಸ್ಥಾನದ 5ನೇ ವಾರ್ಷಿಕೋತ್ಸವ ಸಂಭ್ರಮದಿಂದ ನೆರವೇರಿತು.

ನಾಗರಿಕ ವೇದಿಕೆಯ ಅಧ್ಯಕ್ಷೆ ಪ್ರೇಮಾ ಬೋಗಾರ ಮಾತನಾಡಿ, ‘ನಾಗರಿಕ ವೇದಿಕೆಯ ಸಹಾಯದಿಂದ ಮಹಿಳೆಯರೇ ಸ್ವತಃ ನಿರ್ಮಿಸಿರುವ ಅನ್ನಪೂರ್ಣೇಶ್ವರಿ ದೇವಸ್ಥಾನ ಎಲ್ಲ ಜನ ವರ್ಗದವರಿಗೆ ಒಂದು ನೆಮ್ಮದಿಯ ತಾಣವಾಗಿದೆ ‘ ಎಂದರು.

ಸಮಾರಂಭದಲ್ಲಿ ಕಾರ್ಯದರ್ಶಿ ಪಾರ್ವತಮ್ಮ ಹಲಗಣ್ಣನವರ, ಖಜಾಂಚಿ ಸುಲೋಚನಾ ದಡ್ಡಿ, ಹಿರಿಯ ಸದಸ್ಯರಾದ ರತ್ನಾ ಭೀಮಕ್ಕನವರ, ತೇಜಸ್ವಿನಿ ಕಾಶೆಟ್ಟಿ, ರೇಣುಕಾ ಗುಡಿಮನಿ, ಸರೋಜಾ ಬನ್ನೂರ, ರೇಣುಕಾ ನರಗುಂದ, ಮಧುಮತಿ ಚಿಕ್ಕೇಗೌಡರ್, ಸರೋಜಾ ಪಾಟೀಲ, ಅನುಪಮಾ ಹಿರೇಮಠ, ರಾಜೇಶ್ವರಿ ಬಿಷ್ಟನಗೌಡರ್ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.