ADVERTISEMENT

ಹಾವೇರಿ: ಒಂಬತ್ತು ಮಂದಿಗೆ ಕೋವಿಡ್‌ ದೃಢ

ಜಿಲ್ಲೆಯಲ್ಲಿ 175ಕ್ಕೆ ಏರಿಕೆಯಾದ ಪ್ರಕರಣಗಳು: 19 ಮಂದಿ ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 14:42 IST
Last Updated 6 ಜುಲೈ 2020, 14:42 IST
   

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ ಒಂಬತ್ತು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಹಾಗೂ 19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 175 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಒಟ್ಟು 56 ಜನರು ಸೋಂಕಿನಿಂದ ಗುಣಮುಖರಾದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ. 117 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.
ಶಿಗ್ಗಾವಿ ತಾಲೂಕಿನಲ್ಲಿ ಆರು, ಹಾವೇರಿ, ಹಾನಗಲ್ ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ ತಲಾ ಒಂದು ಪ್ರಕರಣ ಸೇರಿ ಒಂಬತ್ತು ಪ್ರಕರಣಗಳು ಸೋಮವಾರ ದೃಢಗೊಂಡಿವೆ.

ಶಿಗ್ಗಾವಿಯ ಹಳೆಪೇಟೆಯ 37 ವರ್ಷದ ಮಹಿಳೆ (ಪಿ-167), 70 ವರ್ಷದ ಪುರುಷ (ಪಿ-168), 60 ವರ್ಷದ ಮಹಿಳೆ (ಪಿ-169), ಮೌಲಾಲಿ ಗುಡ್ಡದ 48 ವರ್ಷದ ಪುರುಷ (ಪಿ-170) ಹಾಗೂ ಮೆಬೂಬ ನಗರದ 45 ವರ್ಷದ ಪುರುಷ (ಪಿ-171), ಅಂದಲಗಿ ಗ್ರಾಮದ ಕೆಲಗೇರಿ ಓಣಿಯ 39 ವರ್ಷದ ಪುರುಷ (ಪಿ-172), ಹಾವೇರಿಯ ಶಿವಲಿಂಗನಗರದ 38 ವರ್ಷದ ಪುರುಷ (ಪಿ-173), ಹಾನಗಲ್ ತಾಲ್ಲೂಕು ಅಕ್ಕಿ ಆಲೂರು ಕೆಳಗಿನ ಓಣಿಯ 30 ವರ್ಷದ ಮಹಿಳೆ (ಪಿ-174), ಹಿರೇಕೆರೂರು ತಾಲ್ಲೂಕಿನ ರಾಮತೀರ್ಥದ 65 ವರ್ಷದ ಮಹಿಳೆ (ಪಿ-175) ಕೋವಿಡ್ ಸೋಂಕು ದೃಢಗೊಂಡಿದ್ದು, ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಪ್ರವಾಸ ಹಿನ್ನೆಲೆ:37 ವರ್ಷ ಮಹಿಳೆ, 70 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆ ಶಿಗ್ಗಾಂವ ನಗರದ ಹಳೆಪೇಟೆ ಕಂಟೈನ್‍ಮೆಂಟ್ ವಲಯದ ನಿವಾಸಿಗಳಾಗಿದ್ದು, ಈ ಕಾರಣಕ್ಕಾಗಿ ಜುಲೈ 2ರಂದು ಸ್ವಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಜುಲೈ 5ರಂದು ರಾತ್ರಿ ಪಾಸಿಟಿವ್ ದೃಢಗೊಂಡಿದೆ. ಶಿಗ್ಗಾವಿಯ ಮೌಲಾನಾ ಗುಡ್ಡದ ಕಂಟೈನ್‍ಮೆಂಟ್ ಜೋನ್ ನಿವಾಸಿ 48 ವರ್ಷದ ಪುರುಷ ಹಾಗೂ ಮೆಹಬೂಬ್‌ ನಗರದ ಕಂಟೈನ್‍ಮೆಂಟ್ ವಲಯದ ನಿವಾಸಿ 45 ವರ್ಷದ ಪುರುಷ ಪಿ-10598ರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಜುಲೈ 2ರಂದು ಗಂಟಲು ದ್ರವ ತೆಗೆದು ಲ್ಯಾಬ್ ಕಳುಹಿಸಲಾಗಿತ್ತು. ಜುಲೈ 5 ರಂದು ಇಬ್ಬರಿಗೂ ಪಾಸಿಟಿವ್ ದೃಢಪಟ್ಟಿದೆ.

ಹಾವೇರಿ ಶಿವಲಿಂಗನಗರದಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುವ 38 ವರ್ಷದ ಪುರುಷ ಜ್ವರ ಮತ್ತು ಕೆಮ್ಮಿನ ಕಾರಣ ಜುಲೈ 2ರಂದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜುಲೈ 5ರಂದು ಕೋವಿಡ್ ಸೋಂಕು ಪಾಸಿಟಿವ್ ವರದಿ ಬಂದಿದೆ.

ಸದರಿ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ‘ಕಂಟೈನ್‍ಮೆಂಟ್ ಜೋನ್’ ಆಗಿ ಪರಿವರ್ತಿಸಲಾಗಿದೆ. ನಗರದ ಪ್ರದೇಶದಲ್ಲಿ ವಾಸಿಸುವ ಸೋಂಕಿತರ ನಿವಾಸದ 200 ಮೀಟರ್ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶವಾದ ಅಂದಲಗಿ ಹಾಗೂ ರಾಮತೀರ್ಥ ಗ್ರಾಮಗಳನ್ನು ಸಂಪೂರ್ಣವಾಗಿ ‘ಬಫರ್ ಜೋನ್’ ಆಗಿ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.