ರಾಣೆಬೆನ್ನೂರು:ಸ್ವಾತಂತ್ರ್ಯದಿನಾಚರಣೆ ಬಂದರೆ ಇಲ್ಲೊಬ್ಬರಿಗೆ ಎಲ್ಲಿಲ್ಲದ ಸಡಗರ. ಈ ಬಾರಿಯೂ ತಲೆಕೂದಲುಗಳನ್ನು ಧ್ವಜ ಸ್ತಂಭದ ಆಕಾರದಲ್ಲಿ ಕತ್ತರಿಸಿದ ದೇಶಾಭಿಮಾನ ಮೆರೆದಿದ್ದಾರೆ.
ವೃತ್ತಿಯಲ್ಲಿ ಕ್ಷೌರಿಕರಾದರೂಗೃಹ ರಕ್ಷಕ ದಳದಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಗಾಂಧಿಗಲ್ಲಿಯ ನಿವಾಸಿ ಜಗದೀಶ ನಿಂಗಪ್ಪ ಹಡಪದ, ಪ್ರತಿ ಬಾರಿಸ್ವಾತಂತ್ರ್ಯ ಉತ್ಸವ ದಿನಾಚರಣೆಯಂದು ಹೊಸ ಬಗೆಯ ವಿಶೇಷದಿಂದ ಗಮನ ಸೆಳೆಯುತ್ತಿದ್ದಾರೆ.
ತಲೆಯ ಕೂದಲುಗಳಲ್ಲಿ ಧ್ವಜ, ಭಾರತ ನಕಾಶೆ, ಸ್ವಾತಂತ್ರ್ಯೋತ್ಸವ, ಹಿಂದೂಸ್ಥಾನ, ಜೈ ಹಿಂದ್ ಸೇರಿದಂತೆ ವಿವಿಧ ಘೊಷಣೆಗಳನ್ನು ಬರೆದು ದೇಶಾಭಿಮಾನ ಮೂಡಿಸುತ್ತಾರೆ. ಈ ಬಾರಿ ತಲೆಯ ಹಿಂಭಾಗದಲ್ಲಿ ರಾಷ್ಟ್ರಧ್ವಜ ಹಾಗೂ 75ರ ಸಂಭ್ರಮ ಎಂಬ ಶೀರ್ಷಿಕೆಯನ್ನು ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.