ADVERTISEMENT

ಬಸವೇಶ್ವರ, ಬ್ರಹ್ಮೇಶ್ವರ ರಥೋತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:52 IST
Last Updated 24 ಫೆಬ್ರುವರಿ 2026, 6:52 IST
ಹಿರೇಕೆರೂರ ತಾಲೂಕಿನ ಅಬಲೂರು ಗ್ರಾಮದ ಬಸವೇಶ್ವರ ದೇವರ ಮೂರ್ತಿ.
ಹಿರೇಕೆರೂರ ತಾಲೂಕಿನ ಅಬಲೂರು ಗ್ರಾಮದ ಬಸವೇಶ್ವರ ದೇವರ ಮೂರ್ತಿ.   

ಹಿರೇಕೆರೂರ: ತಾಲ್ಲೂಕಿನ ಅಬಲೂರು ಗ್ರಾಮದ ಬಸವೇಶ್ವರ ಮತ್ತು ಬ್ರಹ್ಮೇಶ್ವರ ದೇವರ ರಥೋತ್ಸವವು ಫೆ.24ರಂದು ಜರುಗಲಿದೆ.

ಫೆ.24 ರಂದು ಸಣ್ಣ ರಥೋತ್ಸವ, ಫೆ.25 ರಂದು ದೊಡ್ಡ ರಥೋತ್ಸವ, ಗುಗ್ಗಳ ನಡೆಯಲಿದೆ. ಫೆ.26ರಂದು ಓಕಳಿ ಮತ್ತು ಬಂಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ.  

ಗ್ರಾಮದಲ್ಲಿ ಬಸವೇಶ್ವರ, ಬ್ರಹ್ಮಲಿಂಗೇಶ್ವರ, ಸೋಮೇಶ್ವರ, ಆದಿನಾರಾಯಣ, ಸೂರ್ಯನಾರಾಯಣ, ಮಹಾಸರಸ್ವತಿ, ಗ್ರಾಮದೇವತೆ, ಉಡುಚಲಾಂಬ, ತೇರುಬಸವಾಂಬ ಮೂರ್ತಿಗಳು ಹಾಗೂ ಅನೇಕ ವೀರಗಲ್ಲುಗಳು, ಮಹಾಸತಿ ಕಲ್ಲುಗಳು, ಸುಮಾರು 23 ಶಿಲಾ ಶಾಸನಗಳು ಅಬಲೂರು ಗ್ರಾಮದ ಇತಿಹಾಸ ಪರಂಪರೆ ಹಾಗೂ ಸಾಂಸ್ಕತಿಕ ಶ್ರೀಮಂತಿಕೆ ಸಾರುತ್ತವೆ.

ADVERTISEMENT

ರಥೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.