ADVERTISEMENT

₹15,000 ಲಂಚಕ್ಕೆ ಬೇಡಿಕೆ: ಹಾವೇರಿ ನಗರಸಭೆ ಪೌರಾಯುಕ್ತ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 14:06 IST
Last Updated 19 ಜುಲೈ 2022, 14:06 IST
ಹಾವೇರಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಮಂಗಳವಾರ ದಾಖಲೆ ಪರಿಶೀಲನೆ ನಡೆಸುತ್ತಿರುವುದು
ಹಾವೇರಿ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಮಂಗಳವಾರ ದಾಖಲೆ ಪರಿಶೀಲನೆ ನಡೆಸುತ್ತಿರುವುದು    

ಹಾವೇರಿ: ಇಲ್ಲಿನ ನಗರಸಭೆ ಕಚೇರಿಯಲ್ಲಿ ಮಂಗಳವಾರ ₹15 ಸಾವಿರ ಲಂಚ ಪಡೆಯುವಾಗ ಪೌರಾಯುಕ್ತ ವಿ.ಎಂ.ಪೂಜಾರ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಮಲ್ಲಾಡದ ಈ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ನಗರದ ಆಯ್ದ 15 ಸ್ಥಳಗಳಲ್ಲಿ ‘ಸ್ವಚ್ಛ ಭಾರತ ಯೋಜನೆ’ಯ ಜಾಗೃತಿ ಫಲಕಗಳನ್ನು ಅಳವಡಿಸಲು ದಾವಣಗೆರೆಯ ಗ್ಲೋಬಲ್‌ ವಿಂಗ್‌ ಸೊಸೈಟಿಗೆ ಟೆಂಡರ್‌ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ, ಗುತ್ತಿಗೆದಾರರಿಗೆ ₹3 ಲಕ್ಷ ಟೆಂಡರ್‌ ಮೊತ್ತ ನೀಡಲು ₹15 ಸಾವಿರ ಲಂಚದ ಬೇಡಿಕೆ ಇಡಲಾಗಿತ್ತು.

ವಿ.ಎಂ.ಪೂಜಾರ, ಪೌರಾಯುಕ್ತ,
ಹಾವೇರಿ ನಗರಸಭೆ

ಈ ಬಗ್ಗೆ ಗ್ಲೋಬಲ್‌ ವಿಂಗ್‌ ಸೊಸೈಟಿ ಮಾಲೀಕ ಅಣ್ಣಪ್ಪ ನಾಯ್ಕ ಹಾವೇರಿಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್‌. ನೇತೃತ್ವದ ತಂಡ ಮಂಗಳವಾರ ಸಂಜೆ 4.30ರ ವೇಳೆಗೆ ಯಶಸ್ವಿ ಕಾರ್ಯಾಚರಣೆ ನಡೆಸಿತು.

ADVERTISEMENT

ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

ಲಂಚದ ಹಾವಳಿ:

ಹಾವೇರಿ ನಗರಸಭೆಯಲ್ಲಿ ಸಾರ್ವಜನಿಕರು ಯಾವುದೇ ಸೌಲಭ್ಯ ಪಡೆಯಲು ಮತ್ತು ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಬೇಕಿದೆ. ನಗರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸೋಮಶೇಖರ ಮಲ್ಲಾಡದ,
ಕಿರಿಯ ಆರೋಗ್ಯ ನಿರೀಕ್ಷಕ,
ಹಾವೇರಿ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.