ADVERTISEMENT

ಬಡವರಿಗೆ ನಿವೇಶನ ಹಂಚಿಕೆ ಶೀಘ್ರ

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 14:53 IST
Last Updated 23 ಜುಲೈ 2022, 14:53 IST
ಬ್ಯಾಡಗಿ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರು ರಾಯ್ಕರ್‌, ಮುಖ್ಯಾಧಿಕಾರಿ ಯೇಸು ಬೆಂಗಳೂರ ಪಾಲ್ಗೊಂಡರು
ಬ್ಯಾಡಗಿ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರು ರಾಯ್ಕರ್‌, ಮುಖ್ಯಾಧಿಕಾರಿ ಯೇಸು ಬೆಂಗಳೂರ ಪಾಲ್ಗೊಂಡರು   

ಬ್ಯಾಡಗಿ: ‘ಪಟ್ಟಣದ ಕಡು ಬಡವರಿಗೆ ಆಶ್ರಯ ಯೋಜನೆಯಡಿ 10 ಎಕರೆ ಭೂಮಿ ಮಂಜೂರಾಗಿದ್ದು, ಶೀಘ್ರದಲ್ಲೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು’ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣ ಪುರಸಭೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ತಾಂತ್ರಿಕ ಕಾರಣಗಳಿಂದ ನಿವೇಶನ ಹಂಚಿಕೆಯಲ್ಲಿ ವಿಳಂಬವಾಗಿದೆ. ಹೀಗಾಗಿ ಅಗ್ನಿಶಾಮಕ ಠಾಣೆಯ ಬಳಿ 10 ಎಕರೆ ಜಾಗದಲ್ಲಿ ತಲಾ 600 ಚದರ ಅಡಿ ನಿವೇಶನ ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ. ಮನೆ ಇಲ್ಲದವರು ಹಾಗೂ ಬಾಡಿಗೆ ಮನೆಯಲ್ಲಿದ್ದು ಸಂಕಷ್ಟದಲ್ಲಿರುವ ನಿಜವಾದ ಬಡವರನ್ನು ಗುರುತಿಸಬೇಕು’ ಎಂದು ಸದಸ್ಯರಿಗೆ ಸಲಹೆ ನೀಡಿದರು.

ADVERTISEMENT

‘ಮಲ್ಲೂರ ರಸ್ತೆಯ ಪಕ್ಕದ ಬಡಾವಣೆಯಲ್ಲಿ ಜಿ+1 ಮಾದರಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ₹30 ಸಾವಿರ ಹಣ ತುಂಬಿರುವ ಎಲ್ಲಾ 633 ಫಲಾನುಭವಿಗಳ ಡಿಪಿಆರ್ ಸಿದ್ಧಪಡಿಸಲಾಗಿದೆ. ಹಣ ಬಿಡುಗಡೆಯಾದ ಬಳಿಕ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ’ ಎಂದರು.

‘ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಕಸಗಳನ್ನು ಹಾಕುವವರ ವಿರುದ್ಧ ಹಾಗೂ ಹಸಿ–ಒಣಕಸ ಬೇರ್ಪಡಿಸದಿದ್ದರೆ ದಂಡ ವಸೂಲಿ ಮಾಡಬೇಕು’ಎಂದುಮುಖ್ಯಾಧಿಕಾರಿಗೆಸೂಚಿಸಿದರು.

ಖಾಲಿ ನಿವೇಶನಗಳಲ್ಲಿ ಗಿಡ ಹಾಗೂ ಕಸ ಹೆಚ್ಚುತ್ತಿದ್ದು, ನಿವೇಶನ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದರೂ ಸ್ಪಂದಿಸುತ್ತಿಲ್ಲ. ಅಂತಹ ನಿವೇಶನಗಳ ಮೇಲೆ ಪುರಸಭೆ ಭೋಜಾ ಕ್ರೋಢೀಕರಿಸಲು ಕಾನೂನಿನಲ್ಲಿ ಅವಕಾಶವಿದೆ. ಸಭೆಯು ಇದಕ್ಕೆ ಅನುಮತಿ ನೀಡಬೇಕು’ ಎಂದು ಮುಖ್ಯಾಧಿಕಾರಿ ಯೇಸು ಬೆಂಗಳೂರ ಮನವಿ ಮಾಡಿದರು. ಪುರಸಭೆ ಸದಸ್ಯರು ಒಪ್ಪಿಗೆ ಸೂಚಸಿದರು.

‘ಸಂತೆ ಮೈದಾನ, ಬಸ್ ನಿಲ್ದಾಣ, ತಾಲ್ಲೂಕು ಕ್ರೀಡಾಂಗಣ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ದೂರು ಕೇಳಿಬಂದಿದ್ದು, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಅಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಈರಣ್ಣ ಬಣಕಾರ, ಮಂಜಣ್ಣ ಬಾರ್ಕಿ, ಫಕ್ಕೀರಮ್ಮ ಛಲವಾದಿ, ಚನ್ನವೀರಪ್ಪ ಶೆಟ್ಟರ, ಮಂಗಳಾ ಗೆಜ್ಜೆಳ್ಳಿ, ಮೆಹಬೂಬ್ ಅಗಸನಹಳ್ಳಿ, ಮಲ್ಲಮ್ಮ ಪಾಟೀಲ, ಹನುಮಂತಪ್ಪ ಮ್ಯಾಗೇರಿ, ಶಿವರಾಜ ಅಂಗಡಿ, ಮಹ್ಮದ್ ರಫೀಕ್ ಮುದಗಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.