ಬ್ಯಾಡಗಿ: ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಬೆಸ್ತ ಹಾಗೂ ಕೋಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಚಂದ್ರಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ನಿಂಗಪ್ಪ ಹೆಗ್ಗಣ್ಣನವರ ಮಾತನಾಡಿ, ‘ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿರುವುದರಿಂದ ಸಮಾಜದ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿದ್ದು, ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡ ಹೊನ್ನಪ್ಪ ಸಣ್ಣಬಾರ್ಕಿ ಮಾತನಾಡಿದರು. ಹಳೇ ಪುರಸಭೆಯಿಂದ ಆರಂಭವಾದ ಪ್ರತಿಭಟನಾ ಮೆರವಣೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಚಂದ್ರು ಮುಳಗುಂದ ಗುಡ್ಡಪ್ಪ ಬಾರ್ಕಿ, ಚಂದ್ರಪ್ಪ ದೊಡ್ಮನಿ, ಯಲ್ಲಪ್ಪ ಓಲೇಕಾರ, ಸುರೇಶ ಹುಳಬುತ್ತಿ, ಜಿತೇಂದ್ರ ಸುಣಗಾರ, ಮಂಜಣ್ಣ ಸುಣಗಾರ, ಶಿವರಾಜ ಹಿರೇಮತ್ತೂರ, ಮಾಲತೇಶ ದೇವಗೇರಿ, ಅಶೋಕ ಊದಗಟ್ಟಿ, ಮಂಜಪ್ಪ ಬಾರ್ಕಿ ಇದ್ದರು.