ADVERTISEMENT

ಹಾವೇರಿ | ಜಾತ್ರೆಯಲ್ಲಿ ಪ್ರಾಣಿಬಲಿ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 16:02 IST
Last Updated 30 ಜನವರಿ 2023, 16:02 IST
ದಯಾನಂದ ಸ್ವಾಮೀಜಿ
ದಯಾನಂದ ಸ್ವಾಮೀಜಿ   

ಹಾವೇರಿ: ‘ಹಾವನೂರಿನ ದ್ಯಾಮವ್ವದೇವಿಯ ಜಾತ್ರೆ ಹಾಗೂ ಇತರ ಜಾತ್ರೆಗಳಲ್ಲಿ ಕೋಣ, ಕುರಿ, ಆಡು, ಕೋಳಿ ಮುಂತಾದ ಪ್ರಾಣಿಗಳ ಬಲಿಯನ್ನು ತಡೆಗಟ್ಟಲು ಹಾವೇರಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುಂದಾಗಬೇಕು’ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ, ಬಸವಧರ್ಮ ಜ್ಞಾನಪೀಠ ಮತ್ತು ಪಶು-ಪ್ರಾಣಿಬಲಿ ನಿರ್ಮೂಲನಾ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಹೈಕೋರ್ಟಿನ ಆದೇಶಗಳ ಹಿನ್ನೆಲೆಯಲ್ಲಿ, 1959ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಕಾನೂನು, ಮತ್ತು ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಪ್ರಾಣಿಬಲಿ ಮಾಡುವಂತಿಲ್ಲ. ಕಾನೂನಿನ ಪ್ರಕಾರ ಕರ್ನಾಟಕದಲ್ಲಿ ದೇವರು– ಧರ್ಮದ ಹೆಸರಿನಲ್ಲಿ, ಹರಕೆಯ ರೂಪದಲ್ಲಿ ಜಾತ್ರಾ ಪರಿಸರ, ಧಾರ್ಮಿಕ ಸಮಾವೇಶ, ಹೊಲ ಗದ್ದೆಗಳು, ಸಾರ್ವಜನಿಕ ಪ್ರದೇಶ, ದೇವಾಲಯದ ಒಳಗೆ-ಹೊರಗೆ ಪ್ರಾಣಿಗಳ ಬಲಿಕೊಡುವುದು, ಹತ್ಯೆ ಮಾಡುವುದು, ಹಿಂಸಿಸುವುದು ನಿಷೇಧಿಸಲ್ಪಟ್ಟಿದ್ದು, ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT