ಹಾನಗಲ್: ‘ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು, ವಿಜಯೋತ್ಸವ ಆಚರಿಸಿದ್ದು ವಿಕೃತಿ’ ಎಂದು ಮಹಿಳಾ ಸಂಘಟನೆಯ ಮಧುಮತಿ ಪೂಜಾರ ಹೇಳಿದರು.
ಇಲ್ಲಿ ಮಾತಾ ಅನ್ನಪೂರ್ಣೇಶ್ವರಿ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್ ವತಿಯಿಂದ ಪಿಎಸ್ಐ ದೀಪಾಲಿ ಗುಡೋಡಗಿ ಅವರನ್ನು ಭಾನುವಾರ ಸನ್ಮಾನಿಸಿ ಮಾತನಾಡಿದರು.
‘ವಿಜಯೋತ್ಸವ ಆಚರಿಸಿದವರನ್ನು ಜೈಲಿಗಟ್ಟಿದ ಪಿಎಸ್‌ಐ ದೀಪಾಲಿ ಅವರ ಧೈರ್ಯ ಅನುಕರಣೀಯ’ ಎಂದರು.
ಲಕ್ಷ್ಮೀ ಮಲಗುಂದ, ಕವಿತಾ ಹಿರೇಗೌಡರ, ಸುನಿತಾ ಕೂಡಲಮಠ, ಪ್ರೇಮಾ ಬಡಿಗೇರ, ಗಾಯತ್ರಿ ಭದ್ರಶೆಟ್ಟಿ, ಚೈತ್ರಾ ಮುಷ್ಠಿ, ಶೀಲಾ ಮಂಜುನಾಥ, ಆರ್.ಆರ್. ನೇತ್ರಾ, ಹಿರಿಜಮ್ಮ ಕಟ್ಟಿಮನಿ, ಪ್ರೇಮಾ ಮಡಿವಾಳರ, ಮಂಜುಳಾ ಮಡಿವಾಳರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.