ರಟ್ಟೀಹಳ್ಳಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ಆರೋಪಿ ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಆರೋಪಿ ಶಾಹಿದವುಲ್ಲಾ ಚಮನಸಾಬ ಅಂಗರಕಟ್ಟಿ (35 ವರ್ಷ) ಆರೋಪಿ. ಭಾನುವಾರ ಮಧ್ಯಾಹ್ನ ಮಹಿಳೆ ಸಂತೆ ಚೀಲ ಹೊತ್ತು ನಡೆದುಕೊಂಡು ತನ್ನ ಗ್ರಾಮದ ಕಡೆಗೆ ಹೋಗುತ್ತಿರುವಾಗ ಶಾಹಿದವುಲ್ಲಾ ಅಡ್ಡಗಟ್ಟಿ ಊರಿಗೆ ಬಿಡುತ್ತೇನೆ ಎಂದು ನಂಬಿಸಿ ಒತ್ತಾಯಪೂರ್ವಕವಾಗಿ ಬೈಕ್ ಮೇಲೆ ಹತ್ತಿಸಿಕೊಂಡು ತನ್ನ ಜಮೀನಿನ ಕೊಟ್ಟಿಗೆ ಮನೆಗೆ ಕರೆದುಕೊಂಡು ಹೋಗಿ ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಚೀರಾಡುತ್ತಿದ್ದಾಗ ಪಕ್ಕದ ಜಮೀನಿನಲ್ಲಿ ಕೆಲಸ ನಿರತ ರೈತರು ನೆರವಿಗೆ ಧಾವಿಸಿದ್ದಾರೆ. ಪರಿಸ್ಥಿತಿ ಅರಿತ ಆರೋಪಿ ಅಲ್ಲಿಂದ ಪಲಾಯನಗೈದಿದ್ದಾನೆ. ಈ ಕುರಿತು ಮಹಿಳೆ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.