ADVERTISEMENT

ರಟ್ಟೀಹಳ್ಳಿ | ಅತ್ಯಾಚಾರಕ್ಕೆ ಯತ್ನ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಮೇ 2024, 16:06 IST
Last Updated 30 ಮೇ 2024, 16:06 IST
<div class="paragraphs"><p>ಬಂಧನ</p></div>

ಬಂಧನ

   

ರಟ್ಟೀಹಳ್ಳಿ: ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ತಲೆಮರಿಸಿಕೊಂಡಿದ್ದ ಆರೋಪಿ ಶಾಹಿದವುಲ್ಲಾ ಚಮನಸಾಬ.ಅಂಗರಗಟ್ಟಿ ಎಂಬಾತನನ್ನು ಬುಧವಾರ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ.

ಮೇ 26ರಂದು ಮಹಿಳೆಯನ್ನು ಅಡ್ಡಗಟ್ಟಿ ಬೈಕ್‌ನಲ್ಲಿ ಹತ್ತಿಸಿಕೊಂಡು ದಾರಿ ಮಧ್ಯೆ ತನ್ನ ಜಮೀನಿನ ದನಕಟ್ಟುವ ಫಾರ್ಮ್‌ ಕಡೆಗೆ ಹೋಗಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ವಿರುದ್ಧ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಪ್ರಕರಣ ಭೇದಿಸಿದ ರಟ್ಟೀಹಳ್ಳಿ ಪೊಲೀಸ್ ಸಿಬ್ಬಂದಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಗಿರೀಶ ಬೋಜಣ್ಣನವರ, ಹಿರೇಕೆರೂರ ಸಿಪಿಐ ಆರ್.ಎಲ್.ಲಕ್ಷ್ಮೀಪತಿ, ನೇತೃತ್ವದಲ್ಲಿ ರಟ್ಟೀಹಳ್ಳಿ ಪಿ.ಎಸ್.ಐ. ಜಗದೀಶ ಜೆ.ತಂಡದ ಮಂದಾಳತ್ವದಲ್ಲಿ ಸಿಬ್ಬಂದಿ ಮಾಲತೇಶ ನ್ಯಾಮತಿ, ಬಿ.ಆರ್. ಸಣ್ಣಪ್ಪನವರ, ರವಿ ಲಮಾಣಿ, ರಘು ಕದರಮಂಡಲಗಿ, ಮಾರುತಿ ಹಾಲಬಾವಿ, ಡಿಪಿಒ ಹಾವೇರಿ ಅವರನ್ನೊಳಗೊಂಡ ತಂಡ ರಚಿಸಿ ಗೋವಾದ ಪಣಜಿಯಲ್ಲಿ ತಲೆಮರೆಸಿಕೊಂಡಿದ ಆರೋಪಿ ಶಾಹಿದವುಲ್ಲಾನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.ಆರೋಪಿ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಜಫ್ತಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.