ADVERTISEMENT

‘ವಾತಾವರಣದ ಏರಿಳಿತ ತಪ್ಪಿಸಿ ಸಮತೋಲನ ಕಾಯ್ದುಕೊಳ್ಳಿ’: ಶಂಕರಗೌಡ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:28 IST
Last Updated 15 ಜೂನ್ 2025, 13:28 IST
ಸವಣೂರು ಪಟ್ಟಣದ ಕೀರ್ತಿ ಪದವಿ ಮಹಾ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನು ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಪೊಲೀಸ್‌ಗೌಡ್ರ ಸಸಿ ನೆಡುವ ಮೂಲಕ ಉದ್ಘಾಟಿಸಿದರು.
ಸವಣೂರು ಪಟ್ಟಣದ ಕೀರ್ತಿ ಪದವಿ ಮಹಾ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನು ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಪೊಲೀಸ್‌ಗೌಡ್ರ ಸಸಿ ನೆಡುವ ಮೂಲಕ ಉದ್ಘಾಟಿಸಿದರು.   

ಸವಣೂರು: ನಿತ್ಯ ಗಿಡ ಮರಗಳ ಮಾರಣಹೋಮವಾಗುತ್ತಿರುವುದರಿಂದ ಪರಿಸರದ ಸಮತೋಲನದಲ್ಲಿ ಏರಿಳಿತವಾಗಿದ್ದು, ಅದನ್ನು ಸರಿಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯ ಬೆಳೆಸುವದು ಅವಶ್ಯವಾಗಿದೆ ಎಂದು ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಪೊಲೀಸ್‌ಗೌಡ್ರ ತಿಳಿಸಿದರು.

ಪಟ್ಟಣದ ಕೀರ್ತಿ ಪದವಿ ಕಾಲೇಜಿನ ಆವರಣದಲ್ಲಿ ಉನ್ನತ್ ಭಾರತ ಅಭಿಯಾನ ಹಾಗೂ ಎನ್‌ಎಸ್‌ಎಸ್ ಘಟಕದ ಅಡಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಗಿಡ ಮರಗಳನ್ನು ಕಡಿದು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ವಾತಾವರಣದಲ್ಲಿ ಏರಿಳಿತಗಳಾಗಿ ಹವಾಮಾನ ಪರಿಶುದ್ಧತೆ ಕಳೆದುಕೊಂಡಿರುವುದರಿಂದ ಕಾಲಕ್ಕೆ ತಕ್ಕಂತೆ ಮಳೆ ಬೆಳೆಗಳು ಸಮರ್ಪಕವಾಗಿ ಬರುತ್ತಿಲ್ಲ ಎಂದು ವಿಷಾದಿಸಿದರು.

ADVERTISEMENT

ಪ್ರಾಚಾರ್ಯ ಮಾಲತೇಶ ದಾನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎ.ಎಚ್.ಬರಡಿ, ಐ.ಕೆ.ಕಲ್ಮನಿ, ಆರ್.ವಿ.ದ್ಯಾಮನಗೌಡ್ರ, ಶಿಲ್ಪಾ ಕೂಡಲ, ಗೀತಾ ಕೂಡಲ, ಲಾವಣ್ಯ ಎಮ್ಮಿ, ಅಮಿತ್ ಸರ್ವದೆ, ಸರಸ್ವತಿ ಮುಗಳಿ ಪಾಲ್ಗೊಂಡಿದ್ದರು.

ಅಶ್ವಿನಿ ಕರಿಗಾರ ಹಾಗೂ ಮಲ್ಲಿಕಾರ್ಜುನ ಬಸಣ್ಣವರ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.