ADVERTISEMENT

ಹಿರೇಕೆರೂರು: 85 ಬಾವಲಿಗಳ ಬೇಟೆ, ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 7:29 IST
Last Updated 14 ಆಗಸ್ಟ್ 2021, 7:29 IST
ಹಿರೇಕೆರೂರು ಸಮೀಪದ ಮಾಸೂರು ಗ್ರಾಮದ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ
ಹಿರೇಕೆರೂರು ಸಮೀಪದ ಮಾಸೂರು ಗ್ರಾಮದ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ   

ಹಿರೇಕೆರೂರು (ಹಾವೇರಿ ಜಿಲ್ಲೆ): ಮಾಸೂರು ಗ್ರಾಮದ ಸಮೀಪ ಕುಮದ್ವತಿ ನದಿ ದಡದಲ್ಲಿ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು ಜಿಲ್ಲೆ ಆನೇಕಲ್‌ನ ಮಂಜುನಾಥ ರಾಮಣ್ಣ, ತುಮಕೂರು ಜಿಲ್ಲೆ ಸತ್ಯಮಂಗಲದ ಕೃಷ್ಣಪ್ಪ ರಾಮಕೃಷ್ಣಯ್ಯ, ಸಂಕಾಪುರದ ನಾರಾಯಣ ನಾರಾಯಣಪ್ಪ, ಗೋಲೂರಿನ ಲೋಕೇಶ ಲಕ್ಷ್ಮಯ್ಯ ಸಂಕಾಪುರ, ಸತ್ಯಮಂಗಲದ ಹುಲ್ಲೂರಯ್ಯ ಲಕ್ಷ್ಮಯ್ಯ ಬಂಧಿತ ಆರೋಪಿಗಳು.

ಬಂಧಿತರಿಂದ 85 ಮೃತ ಬಾವಲಿಗಳು, ಒಂದು ವಾಹನ, ಬಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಸಿಬ್ಬಂದಿ ಚಮನ್‌ಅಲಿ ಕಾಲೆಖಾನವರ, ವಿ.ಬಿ.ಮೊಹಿತೆ, ಅಬ್ದುಲ್‌ ಖಾದರ್‌ ಜಿಲಾನಿ, ಕನಕೇಶ, ಬಸವರಾಜ, ಗುರುಪ್ರಸಾದ, ಪ್ರಶಾಂತ, ಪ್ರವೀಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.