ರಾಣೆಬೆನ್ನೂರು: ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದಿಂದ ಏಪ್ರಿಲ್ 24 ಮತ್ತು 25ರಂದು ಏರ್ಪಡಿಸಿದ್ದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ಬಿಐಇಸಿನಲ್ಲಿ ಮೂರು ದಿನಗಳ ಕಾಲ ನಡೆದ ಭಾರತ್ ಪ್ರಿಂಟ್ ಎಕ್ಸ್ ಪೋ -2025 ಕ್ಕೆ ನಗರದಿಂದ 35 ಕ್ಕೂ ಅಧಿಕ ಮುದ್ರಣಕಾರರು ಭಾಗವಹಿಸಿದ್ದರು.
ಮುದ್ರಣಕಾರರ ಸಂಘದ ತಾಲ್ಲೂಕು ಅಧ್ಯಕ್ಷ ರವಿ ಪೂಜಾರ ಮಾತನಾಡಿ, ಮುದ್ರಣ ಮತ್ತು ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ನವ ನವೀನ ತಂತ್ರಜ್ಞಾನ, ಅತ್ಯಾಧುನಿಕ ಮುದ್ರಣ ಯಂತ್ರೋಪಕರಣಗಳ ವೀಕ್ಷಣೆಗೆ ವೇದಿಕೆ ಕಲ್ಪಿಸಲಾಗಿತ್ತು. ದೇಶ ವಿದೇಶಗಳ ಇತ್ತೀಚಿನ ತಂತ್ರಜ್ಞಾನ ಪ್ರದರ್ಶನ ಮುದ್ರಣಕಾರರ ಆಕರ್ಷಣೆಗೊಳಗಾಗಿತ್ತು.
ಈ ಒಂದು ಪ್ರದರ್ಶನಕ್ಕೆ ರಾಣೆಬೆನ್ನೂರಿನಿಂದ 35ಕ್ಕೂ ಹೆಚ್ಚು ಮುದ್ರಣಕಾರರು ಬೆಂಗಳೂರಿಗೆ ತೆರಳಿ ಭಾರತ್ ಪ್ರಿಂಟ್ ಎಕ್ಸ್ ಪೋ ದಲ್ಲಿ ಭಾಗಿಯಾಗುವ ಮೂಲಕ ಮುದ್ರಣ ಮತ್ತು ಪ್ಯಾಕೇಜಿಂಗ್ ಯಂತ್ರಗಳ ಮಾಹಿತಿ ಪಡೆದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.