ADVERTISEMENT

ಜಾಗೃತಿಗಾಗಿ ಪೊಲೀಸ್‌ ಬೈಕ್‌ ರ್‍ಯಾಲಿ

ಜ.18ರಿಂದ ಫೆ.17ರವರೆಗೆ ರಸ್ತೆ ಸುರಕ್ಷತಾ ಮಾಸ: ಹೆಲ್ಮೆಟ್‌ ಧರಿಸದವರಿಗೆ ಗುಲಾಬಿ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 12:40 IST
Last Updated 20 ಜನವರಿ 2021, 12:40 IST
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಹಾವೇರಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್‌ ಬೈಕ್‌ ರ‍್ಯಾಲಿಗೆ ಎಸ್ಪಿ ಕೆ.ಜಿ. ದೇವರಾಜು ಚಾಲನೆ ನೀಡಿದರು. ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದಾರೆ 
ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ಹಾವೇರಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್‌ ಬೈಕ್‌ ರ‍್ಯಾಲಿಗೆ ಎಸ್ಪಿ ಕೆ.ಜಿ. ದೇವರಾಜು ಚಾಲನೆ ನೀಡಿದರು. ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದಾರೆ    

ಹಾವೇರಿ: ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ದ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಾವೇರಿ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ ಚಾಲನೆ ನೀಡಿದರು.

ಜ.18ರಿಂದ ಫೆ.17ರವರೆಗೆ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ’ ಅಂಗವಾಗಿ ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಅವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.

ದಾರಿಯಲ್ಲಿ ಹಾದು ಹೋಗುವ ಹೆಲ್ಮೇಟ್ ಧರಿಸದೇ ಬೈಕ್ ಓಡಿಸುವ ವಾಹನವನ್ನು ತಡೆದು ಗುಲಾಬಿ ಹೂ ನೀಡಿದರು. ಹೆಲ್ಮೆಟ್‌ ಧರಿಸದೇ ಬೈಕ್ ಚಾಲನೆ ಮಾಡಿದರೆ ಉಂಟಾಗುವ ಅವಘಡಗಳು ಹಾಗೂ ಜೀವ ಕಳೆದುಕೊಳ್ಳುವ ಸಂದರ್ಭಗಳನ್ನು ವಿವರಿಸಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಚಾಲಕರಿಗೆ ಮನವರಿಕೆ ಮಾಡಿಕೊಟ್ಟರು.

ADVERTISEMENT

ನಗರದ ಪ್ರಮುಖ ಬೀದಿಗಳಲ್ಲಿ ಬೈಕ್‍ನಲ್ಲಿ ಸಂಚರಿಸುತ್ತಾ ರಸ್ತೆ ನಿಯಮ ಪಾಲನೆ, ಹೆಲ್ಮೆಟ್‌ ಧರಿಸಿ ಬೈಕ್ ಚಾಲನೆಯ ಮಹತ್ವ ಹಾಗೂ ಸಂಚಾರಿ ಮಾರ್ಗಸೂಚಿಗಳ ಅರಿವು ಮೂಡಿಸಿದರು.

ರ‍್ಯಾಲಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ಸಿಪಿಐ ಪ್ರಲ್ಹಾದ ಚನ್ನಗಿರಿ, ಪಿ.ಎಸ್.ಐ. ಬೆಟಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.