ADVERTISEMENT

ಕೃಷ್ಣಮೃಗ ಚರ್ಮ ಮಾರಾಟ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 15:48 IST
Last Updated 25 ಜುಲೈ 2022, 15:48 IST
ಕೃಷ್ಣಮೃಗ ಚರ್ಮ ಮಾರಾಟ ಮಾಡುವ ಜಾಲವನ್ನು ಭೇಧಿಸಿದ ಬೆಳಗಾವಿ ಅರಣ್ಯ ಸಂಚಾರಿ (ಜಾಗೃತ) ದಳವು ಈಚೆಗೆ ಐವರು ಆರೋಪಿಗಳನ್ನು ಬಂಧಿಸಿದೆ
ಕೃಷ್ಣಮೃಗ ಚರ್ಮ ಮಾರಾಟ ಮಾಡುವ ಜಾಲವನ್ನು ಭೇಧಿಸಿದ ಬೆಳಗಾವಿ ಅರಣ್ಯ ಸಂಚಾರಿ (ಜಾಗೃತ) ದಳವು ಈಚೆಗೆ ಐವರು ಆರೋಪಿಗಳನ್ನು ಬಂಧಿಸಿದೆ   

ಹಾವೇರಿ:ಕೃಷ್ಣಮೃಗ ಚರ್ಮ ಮಾರಾಟ ಮಾಡುವ ಬೃಹತ್ ಜಾಲವನ್ನು ಭೇಧಿಸಿದ ಬೆಳಗಾವಿ ಅರಣ್ಯ ಸಂಚಾರಿ (ಜಾಗೃತ) ದಳವು ಈಚೆಗೆ ಐವರು ಆರೋಪಿಗಳನ್ನು ಬಂಧಿಸಿದೆ.

ರಾಣೆಬೆನ್ನೂರು ತಾಲ್ಲೂಕಿನ ಕಜ್ಜರಿ ಗ್ರಾಮದ ತ್ಯಾಗರಾಜ ಲಕ್ಷ್ಮಣ ಲಮಾಣಿ, ರಾಣೆಬೆನ್ನೂರು ನಗರದ ಗುರುನಾಥ ಐರಣಿ, ದೇವರಗುಡ್ಡದ ಬೀರಪ್ಪ ಮೇಡ್ಲೇರಿ, ಬ್ಯಾಡಗಿ ತಾಲ್ಲೂಕಿನ ಬುಡಪ್ಪನಹಳ್ಳಿಯ ತಿರುಕಪ್ಪ ಗೋಡೆರ ಹಾಗೂ ಹಾವೇರಿ ತಾಲ್ಲೂಕಿನ ಬರಡಿ ಗ್ರಾಮದ ನಾಗಪ್ಪ ದ್ಯಾಮಪ್ಪ ಹರಿಜನ ಬಂಧಿತ ಆರೋಪಿಗಳು.

ಆರೋಪಿಗಳಿಂದ ಮೂರು ಕೃಷ್ಣಮೃಗದ ಚರ್ಮಗಳು, ವನ್ಯಪ್ರಾಣಿಗಳನ್ನು ಬೇಟೆಯಾಡಲು ಬಳಸುವ ತಂತಿಯ ನಾಲ್ಕು ಉರಳು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ರಾಣೆಬೆನ್ನೂರು ಪಟ್ಟಣದಲ್ಲಿ ಆರೋಪಿಗಳು ಕೃಷ್ಣಮೃಗ ಚರ್ಮಗಳನ್ನು ₹15 ಲಕ್ಷಕ್ಕೆ ವ್ಯವಹಾರ ಮಾಡುವ ಸಮಯದಲ್ಲಿ ಬೆಳಗಾವಿಯ ಜಾಗೃತ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಿ. ತೇಲಿ, ವಿ.ದಿ. ಹುದ್ದಾರ ಅವರ ನೇತೃತ್ವದ ತಂಡಕ್ಕೆ ಸೆರೆ ಸಿಕ್ಕಿದ್ದಾರೆ. ಆರೋಪಿಗಳನ್ನುನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಮಮತಾ ಅಗರಿ, ಉಪವಲಯ ಅರಣ್ಯಾಧಿಕಾರಿ ಡಿ.ಆರ್. ಹಣಜಿ, ಐ.ಎಂ. ಅಕ್ಕಿ, ಮಲ್ಲಿಕಾರ್ಜುನ ಮಡಿವಾಳರ, ಶರಣಬಸವೇಶ್ವರ ಹತ್ತರಕಿ, ರಶೀದ ಮಾಣಿಕಬಾಯಿ ಭಾಗವಹಿಸಿದ್ದರು. ರಾಣೆಬೆನ್ನೂರು ಕೃಷ್ಣಮೃಗ ವನ್ಯಧಾಮದ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.