ಹಾನಗಲ್: ತಾಲ್ಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಪ್ರವಾದಿ ಮೊಹಮ್ಮದ್ ಮುಸ್ತಫಾ ಸ್ವ.ಅ ಸಲ್ಲಮ ಅವರ ಜನ್ಮದಿನವಾದ ಈದ್ ಮಿಲಾದ್ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಗ್ರಾಮದ ಹಜರತ್ ಸೈಯದ್ ಹಸನ್ ಶಾ ವಲಿ ದರ್ಗಾ ಕಮಿಟಿ ವತಿಯಿಂದ ಶಿಬಿರ ಏರ್ಪಡಿಸಲಾಗಿತ್ತು. ಮುಸ್ಲಿಂ ಸಮುದಾಯದ 33 ಯುವಕರು ರಕ್ತದಾನ ಮಾಡಿದರು. ಹುಬ್ಬಳ್ಳಿ ಕಿಮ್ಸ್ ತಂಡದವರು ರಕ್ತ ಸಂಗ್ರಹಣೆ ಮಾಡಿಕೊಂಡರು.
ವಕ್ಥ ಬೋರ್ಡ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಎಂ.ಮುಲ್ಲಾ, ದರ್ಗಾ ಕಮಿಟಿ ಅಧ್ಯಕ್ಷ ಮಖಬೂಲಅಲಿ ಬಾವಾಖಾನವರ, ಉಪಾಧ್ಯಕ್ಷ ಮಖಬೂಲ್ಅಹ್ಮದ್ ಬಡಗಿ, ಪ್ರಮುಖರಾದ ಖಾಜಾಮೊದೀನ್ ಹರವಿ, ಮಹ್ಮದ್ಹುಸೇನ್ ಹುದ್ದಾರ, ಖಾಜಾಮೊದೀನ್ ಬಾವಾಖಾನವರ, ಮುಸ್ತಾಕ್ ಬಂಕಾಪೂರ, ಮೌಲಾಲಿ ಸುಂಕದ, ಇರ್ಷಾದ್ ಯಲಿಗಾರ, ಮುಕ್ತಾರ್ ನಿಪ್ಪಾಣಿ, ಬಾಬುಸಾಬ ತಸೀಲ್ದಾರ್, ಇನ್ನಸ್ ಬಾವಾಖಾನವರ, ಮಲಿಕ್‌ರೆಹಾನ್ ಕೋಟಿ, ಆಸೀಫ್ ನದಾಫ, ಅಬುಸಲೇಹಾ ಅಸುಂಡಿ, ಫಯಾಜ್ ಯಲಿಗಾರ, ಫರಾಜ್ ಯಲಿಗಾರ, ಅಬ್ದುಲ್‌ಖಾದರ್ ಶೇತಸನದಿ, ಮುನ್ನಾ ಬಾಳೂರ, ಜಾಫರ್‌ಸಾಬ್ ಕೋಟಿ, ಹುಸೇನಮಿಯಾ ಬಾವಾಖಾನವರ, ಹಮೆದೀನಸಾಬ ಶೇತಸನದಿ, ಜಯಲಿಂಗಪ್ಪ ಹಳಕೊಪ್ಪ, ಪರಸಪ್ಪ ಮಾವೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.