ADVERTISEMENT

ಬೀದಿ ನಾಯಿಗಳ ದಾಳಿ: 10 ಕುರಿ ಮರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:17 IST
Last Updated 22 ಫೆಬ್ರುವರಿ 2026, 1:17 IST
<div class="paragraphs"><p>ಬೀದಿ ನಾಯಿಗಳು</p></div>

ಬೀದಿ ನಾಯಿಗಳು

   

(ಸಾಂದರ್ಭಿಕ ಚಿತ್ರ)

ಬ್ಯಾಡಗಿ: ತಾಲ್ಲೂಕಿನ ಕಲ್ಲೆದೇವರು ಗ್ರಾಮದ ಹೊರವಲಯದಲ್ಲಿ ದೊಡ್ಡಿಯಲ್ಲಿ ಕೂಡಿ ಹಾಕಿದ್ದ ಕುರಿ ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶನಿವಾರ 10ಕ್ಕೂ ಹೆಚ್ಚು ಮರಿಗಳು ಮೃತಪಟ್ಟಿವೆ.

ADVERTISEMENT

ಪರಿಣಾಮ ₹2 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಗ್ರಾಮದ ಹೊರವಲಯದದಲ್ಲಿ ಅಗಡಿ ಗ್ರಾಮಕ್ಕೆ ಹೋಗುವ ರಸ್ತೆ ಬದಿ ಶರಣಪ್ಪ ಮಾತನವರ ಅವರ ಜಮೀನಿನಲ್ಲಿ ಕುರಿಗಳನ್ನು ಕೂಡಿ ಹಾಕಲಾಗಿತ್ತು. ಅವು ಕಿಟ್ಟಪ್ಪ ಕಾಡಮ್ಮನವರ ಅವರಿಗೆ ಸೇರಿದ ಕುರಿಗಳಾಗಿದ್ದು, ಮಧ್ಯಾಹ್ನ 3 ಗಂಟೆಗೆ ಊಟ  ತರಲು ತೆರಳಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.