ಸಾವು
ಪ್ರಾತಿನಿಧಿಕ ಚಿತ್ರ
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಬಳಿ ಕಾರೊಂದು ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಹಾನಗಲ್ ಪಟ್ಟಣದ ಗಂಗಾನಗರದ ಪ್ರದೀಪ್ ಹನುಮಂತಪ್ಪ ಕನಳ್ಳಿ (34) ಹಾಗೂ ಹಾನಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪದ ಸುನೀಲ ಗೋವಿಂದಪ್ಪ ನಾಗೋಜಿ (19) ಮೃತರು. ಕಾರಿನಲ್ಲಿದ್ದ ಶಿಕಾರಿಪುರದ ವಿಕಾಸ್ ವೆಂಕಟೇಶ ಭೋವಿ (21), ಹುಬ್ಬಳ್ಳಿಯ ಶಿವು ಯಲ್ಲಪ್ಪ ಭೋವಿ (34) ಹಾಗೂ ಹಾನಗಲ್‌ನ ಕೃಷ್ಣ ಕೃಷ್ಣಪ್ಪ ವಾಘ್ಮೋಡೆ (48) ಗಾಯಗೊಂಡಿದ್ದಾರೆ’ ಎಂದು ಹಾನಗಲ್ ಠಾಣೆ ಪೊಲೀಸರು ಹೇಳಿದರು.
‘ಐವರು ಸೇರಿಕೊಂಡು ಕಾರಿನಲ್ಲಿ ಹಾವೇರಿ ಕಡೆಯಿಂದ ಹಾನಗಲ್ ಕಡೆಗೆ ಶನಿವಾರ ಹೊರಟಿದ್ದರು. ಅಕ್ಕಿಆಲೂರು ಸಮೀಪದ ಧರ್ಮಾ ಸೇತುವೆ ಬಳಿ ವೇಗವಾಗಿ ಹೊರಟಿದ್ದ ಕಾರು, ರಸ್ತೆ ತಿರುವಿನಲ್ಲಿ ಸಾಗುವಾಗ ಉರುಳಿಬಿದ್ದಿತ್ತು. ಅತೀ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿರುವ ಸಾಧ್ಯತೆಯಿದೆ’ ಎಂದರು.
‘ಅಪಘಾತದಿಂದಾಗಿ ಕಾರು ಭಾಗಶಃ ಜಖಂಗೊಂಡಿದೆ. ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಮೂವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಅವರ ಆರೋಗ್ಯ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ತಿಳಿಸಿದರು.
‘ಮೃತ ಸುನೀಲ್ ನಾಗೋಜಿ ಎಂಬಾತನೇ ಕಾರು ಚಾಲನೆ ಮಾಡುತ್ತಿದ್ದನೆಂದು ಗೊತ್ತಾಗಿದೆ. ಗಾಯಾಳುಗಳು ನೀಡಿರುವ ಹೇಳಿಕೆ ಆಧರಿಸಿ ಆತನ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.