ADVERTISEMENT

ಹಾವೇರಿ: ಖಾರದ ಪುಡಿ ಎರಚಿ ಸರಗಳವು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 2:59 IST
Last Updated 22 ಸೆಪ್ಟೆಂಬರ್ 2025, 2:59 IST
<div class="paragraphs"><p>ಸರಗಳವು</p></div>

ಸರಗಳವು

   

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ರಸ್ತೆಯಲ್ಲಿ ಮಹಿಳೆಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರವನ್ನು ಕಿತ್ತೊಯ್ಯಲಾಗಿದ್ದು, ಈ ಸಂಬಂಧ ಹಿರೇಕೆರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಸತಿ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ 45 ವರ್ಷದ ಮಹಿಳೆಯೊಬ್ಬರು ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ದೂರುದಾರ ಮಹಿಳೆ, ಕೆಲಸಕ್ಕೆಂದು ಸೆ. 20ರಂದು ಸಂಜೆ 5 ಗಂಟೆಗೆ ದೂದಿಹಳ್ಳಿ ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಮಳೆ ಬರುತ್ತಿದ್ದರಿಂದ ಕೊಡೆ ಹಿಡಿದುಕೊಂಡಿದ್ದರು. ಅದೇ ರಸ್ತೆಯಲ್ಲಿ ಬಂದಿದ್ದ ಆರೋಪಿ, ಕೊಡೆ ಕಸಿದುಕೊಂಡು ಮುರಿದಿದ್ದ. ನಂತರ, ಕಣ್ಣಿಗೆ ಖಾರದ ಪುಡಿ ಎರಚಿದ್ದ. ನಂತರ, ಮಹಿಳೆಯ ಕೊರಳಲ್ಲಿದ್ದ ₹ 60 ಸಾವಿರ ಮೌಲ್ಯದ 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.