ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ತೀವ್ರ ಇಳಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 14:29 IST
Last Updated 2 ಡಿಸೆಂಬರ್ 2023, 14:29 IST
ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ ಮೆಣಸಿನಕಾಯಿ   

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ ಕೇವಲ 1,259 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತೀವ್ರ ಇಳಿಕೆ ಕಂಡಿದೆ.

ಕಳೆದ ಸೋಮವಾರ ಮಾರುಕಟ್ಟೆಗೆ 5,039 ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿತ್ತು. ಏರು ಗತಿಯಲ್ಲಿ ಸಾಗಬೇಕಾದ ಆವಕ ಕನಕ ಜಯಂತಿ ಪ್ರಯುಕ್ತ ಮಾರುಕಟ್ಟೆಗೆ ಗುರುವಾರ ರಜೆ ಘೋಷಣೆಯಾಗಿದ್ದರಿಂದ ಇಂದು ಆವಕದಲ್ಲಿ ತೀವ್ರ ಇಳಿಕೆ ಕಂಡಿದೆ ಎಂದು ವರ್ತಕರ ಅಭಿಪ್ರಾಯವಾಗಿದೆ.

ತೇವಾಂಶ ಹೆಚ್ಚಿರುವ 81 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 24 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್ ಗೆ ₹ 58,889 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿದ್ದು, ಕಳೆದ ಸೋಮವಾರಕ್ಕಿಂತ ₹ 5 ಸಾವಿರ ಇಳಿಕೆಯಾಗಿದೆ. 14 ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 55,590 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿ, ₹ 7 ಸಾವಿರ ಇಳಿಕೆಯಾಗಿದೆ.

ADVERTISEMENT

ಗುಂಟೂರ ತಳಿ ₹ 19,169 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿ ಸ್ಥಿರತೆ ಕಾಯ್ದುಕೊಂಡಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹ 45,699, ಬ್ಯಾಡಗಿ ಕಡ್ಡಿ ₹ 37,229 ಹಾಗೂ ಗುಂಟೂರ ತಳಿ ₹ 16,209 ರಂತೆ ಮಾರಾಟವಾಗಿದ್ದು ಸ್ವಲ್ಪು ಇಳಿಕೆಯಾಗಿದೆ. ಗುರುವಾರದ ಟೆಂಡರ್ ಪ್ರಕ್ರಿಯೆಯಲ್ಲಿ 113 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.