ಸಾವು
(ಪ್ರಾತಿನಿಧಿಕ ಚಿತ್ರ)
ಬ್ಯಾಡಗಿ: ಪಟ್ಟಣದ ಇಸ್ಲಾಂಪುರ ಓಣಿಯ 10ನೇ ತರಗತಿಯ ಬಾಲಕನೊಬ್ಬ ಓದುವಂತೆ ಬುದ್ದಿವಾದ ಹೇಳಿದ್ದಕ್ಕೆ ಸಿಟ್ಟಾಗಿ ಮನೆಯಲ್ಲಿ ನೇಣು ಹಾಕಿಕೊಂಡು ಸೋಮವಾರ ಮೃತಪಟ್ಟಿದ್ದಾನೆ.
ತನ್ನ ಅಜ್ಜನಾದ ಮಲ್ಲಿಕಾರ್ಜುನ ಬಸಪ್ಪ ಮಠದ ಎಂಬವರ ಮನೆಯಲ್ಲಿ ವಾಸವಾಗಿದ್ದ ಶಿಗ್ಗಾವಿ ತಾಲ್ಲೂಕಿನ ಚಿಕ್ಕನೆಲ್ಲೂರು ಗ್ರಾಮದ ರುದ್ರೇಶ ಶಿವಪ್ಪ ಗಂಜಿಗಟ್ಟಿ (15) ಮೃತ ಬಾಲಕ.
ಈತ ಪಟ್ಟಣದ ಎಸ್‌ಎಸ್‌ಪಿಎನ್ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಎನ್ನಲಾಗಿದೆ. ಈ ಕುರಿತು ಮೃತನ ತಾಯಿ ಶಶಿಕಲಾ ದೂರು ನೀಡಿದ್ದಾಳೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.
ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.