ADVERTISEMENT

ಹಿಂದೂ ಶ್ರದ್ಧಾ ಕೇಂದ್ರಗಳ ವಿರುದ್ಧ ಕಾಂಗ್ರೆಸ್ ವ್ಯವಸ್ಥಿತ ಷಡ್ಯಂತ್ರ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 2:58 IST
Last Updated 27 ಆಗಸ್ಟ್ 2025, 2:58 IST
ರಟ್ಟೀಹಳ್ಳಿ ತಾಲ್ಲೂಕು ಬಿಜೆಪಿ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ರಟ್ಟೀಹಳ್ಳಿ ತಾಲ್ಲೂಕು ಬಿಜೆಪಿ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು   

ರಟ್ಟೀಹಳ್ಳಿ: ಹಿಂದೂಗಳ ಶ್ರದ್ಧಾ ಕೇಂದ್ರಗಳ ವಿರುದ್ಧ ಕಾಂಗ್ರೆಸ್ ಪಕ್ಷ ವ್ಯವಸ್ಥಿತ ಷಡ್ಯಂತ್ರ ರೂಪಿಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ. ದೇಶದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಕೆಟ್ಟು ಹೆಸರು ತರುವ ವ್ಯವಸ‍್ಥಿತ ಷಡ್ಯಂತ್ರ  ಮಾಡುತ್ತಿದೆ ಎಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ದೇವರಾಜ ನಾಗಣ್ಣನವರ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಧರ್ಮಸ್ಥಳ ಉಳಿಸಿ ಹೋರಾಟ ಪಾದಯಾತ್ರೆಯಲ್ಲಿ ಮಾತನಾಡಿದರು.

ಯಾವುದೇ ಧರ್ಮ, ಜಾತಿ, ಮತ, ಪಂಥಕ್ಕೆ ಸೀಮಿತವಾಗದೇ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ಅವಮಾನಿಸುವ ಕೃತ್ಯ ನಡೆಯುತ್ತಿದೆ ಎಂದರು.

ADVERTISEMENT

ಬಿಜೆಪಿ ಮುಖಂಡರಾದ ಪಾಲಾಕ್ಷಗೌಡ ಪಾಟೀಲ ಮಾತನಾಡಿ, ಹಿಂದೂ ದೇವಾಲಯಗಳಿಗೆ ಸಾರ್ವಜನಿಕರು ಹೋಗದಂತೆ ಮಾಡುವ ದುರುದ್ದೇಶ ಇಟ್ಟುಕೊಂಡು ಕಾಣದ ಕೈಗಳು ಅಪ್ರಚಾರದಲ್ಲಿ ನಿರತವಾಗಿವೆ. ಪುಣ್ಯಕ್ಷೇತ್ರದ ವಿರುದ್ಧ ರಾಜ್ಯ ಸರ್ಕಾರ ಎಸ್.ಐ.ಟಿ. ರಚಿಸಿ ತನಿಖೆಗೆ ಆದೇಶಿಸಿದ್ದು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆತರುವಂತಾಗಿದೆ. ತಕ್ಷಣ ಸರ್ಕಾರ ಇಂತಹ ಹಿಂದೂ ವಿರೋಧಿ ನೀತಿ ಕೈಬಿಡದಿದ್ದರೆ ಬಿಜೆಪಿ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದರು.

ಮುಖಂಡರಾದ ಅರ್. ಎನ್. ಗಂಗೋಳ ಹಾಗೂ ಎನ್.ಎಂ. ಈಟೇರ, ಮಾತನಾಡಿ, ಸರ್ಕಾರದ ಧೋರಣೆ ಖಂಡಿಸಿದರು. ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಸ್ಥಳೀಯ ವಿರಭದ್ರೇಶ‍್ವರ ದೇವಸ್ಥಾನದಿಂದ ಹೊರಟ ಪಾದಯಾತ್ರೆ ಹಳೇ ಬಸ್ ಸ್ಟ್ಯಾಂಡ್, ಮಹಾಲಕ್ಷ್ಮಿ ಸರ್ಕಲ್, ಮಾರ್ಗವಾಗಿ ಭಗತಸಿಂಗ್‌ ಸರ್ಕಲ್ ತಲುಪಿ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಶಂಭಣ್ಣ ಗೂಳಪ್ಪನವರ, ರಾಜನಗೌಡ ಪಾಟೀಲ, ರವಿ ಹದಡೇರ, ಹನುಮಂತಪ್ಪ ಗಾಜೇರ, ರವಿ ಮುದ್ದಣ್ಣನವರ, ಶ್ರೀದೇವಿ ಭೈರಪ್ಪನವರ, ಸುಶೀಲ ನಾಡಗೇರ, ಅಭಿನಂದನ ಬೋಗಾರ, ಸುರೇಶ ದ್ಯಾವಕ್ಕಳವರ, ರಾಘವೇಂದ್ರ ಹರವಿಶೆಟ್ಟರ, ಮಾಲತೇಶ ಬೆಳಕೇರಿ, ಎನ್.ಸಿ.ಕಠಾರೆ, ಕೆ.ವಾಯ್. ಬಾಜೀರಾಯರ, ಗಣೇಶ ವೇರ್ಣೇಕರ, ಕಾವ್ಯ ಪಾಟೀಲ, ಸರೋಜಾ ಹುರಕಡ್ಲಿ, ಸುರೇಶ ಬೆಣ್ಣಿ, ಮಾಲತೇಶ ಗಂಗೋಳ:ಆನಂದಪ್ಪ ಹಾದಿಮನಿ, ವಿನಾಯಕ ಅಗಡಿ, ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.