ADVERTISEMENT

ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ವಕ್ತಾರರಾಗಿ ಅವಿನಾಶ ನೇಮಕ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 3:06 IST
Last Updated 6 ನವೆಂಬರ್ 2025, 3:06 IST
ಹಿರೇಕೆರೂರು ಪಟ್ಟಣದಲ್ಲಿ  ಅವಿನಾಶ ಸೋಮಲಿಂಗಪ್ಪ ಪೂಜಾರ ಅವರನ್ನು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ  ಜಿಲ್ಲಾ ವಕ್ತಾರರನ್ನಾಗಿ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಎಸ್ಸಿ ಘಟಕದ ಅಧ್ಯಕ್ಷ  ದುರ್ಗಪ್ಪ ನೀರಲಗಿ ಅವರು ನೇಮಕ ಮಾಡಿ ಅದೇಶ ಪತ್ರವನ್ನು ವಿತರಿಸಿದರು

ಹಿರೇಕೆರೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಎಸ್ಸಿ ರಾಜ್ಯ ಘಟಕದ ಅಧ್ಯಕ್ಷ ಆರ್‌.ಧರ್ಮಸೇನ ಅವರ ಆದೇಶದ ಮೇರೆಗೆ ಹಿರೇಕೆರೂರು ಪಟ್ಟಣದ ಅವಿನಾಶ ಸೋಮಲಿಂಗಪ್ಪ ಪೂಜಾರ ಅವರನ್ನು ಕಾಂಗ್ರೆಸ್ ಹಾವೇರಿ ಜಿಲ್ಲಾ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಜಿಲ್ಲಾ ವಕ್ತಾರರನ್ನಾಗಿ ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಎಸ್ಸಿ ಘಟಕದ ಅಧ್ಯಕ್ಷ ದುರ್ಗಪ್ಪ ನೀರಲಗಿ ಅವರು ನೇಮಕ ಮಾಡಿ ಆದೇಶ ಪತ್ರವನ್ನು ನೀಡಿದರು.

ಹಿರೇಕೆರೂರು ತಾಲ್ಲೂಕಿನ ಶಾಸಕ ಯು.ಬಿ. ಬಣಕಾರ ಗೃಹ ಕಚೇರಿಯಲ್ಲಿ ಮಂಗಳವಾರ ಅವಿನಾಶ ಸೋಮಲಿಂಗಪ್ಪ ಪೂಜಾರ ಅವರನ್ನು ಶಾಸಕ ಯು.ಬಿ. ಬಣಕಾರ ಸನ್ಮಾನಿಸಿದರು.

ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭರಮಪ್ಪ ಹರಿಜನ, ಮಾಲತೇಶ ಬೆಟಗೇರಿ, ಮಾದೇವಪ್ಪ ಎಂ. ಮಾಳಮ್ಮನವ‌ರ್, ಮಂಜು ಕಚವಿ, ನಾಗಪ್ಪ ಸೂತ್ತಕೊಟ್ಟಿ, ಶಿವಾಜಿ ದೊಡ್ಡಮನಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.