ADVERTISEMENT

‘ಅಕ್ಷರ ತೃತೀಯ’ಕ್ಕೆ ಕೊರೊನಾ ಕರಿನೆರಳು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 14:39 IST
Last Updated 26 ಏಪ್ರಿಲ್ 2020, 14:39 IST
ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ‘ಅಕ್ಷಯ ತೃತೀಯ’ ದಿನವಾದ ಭಾನುವಾರ ಕೂಡ ಹಾವೇರಿ ನಗರದಲ್ಲಿ ಜ್ಯುವೆಲರಿ ಮಳಿಗೆಗಳು ಮುಚ್ಚಿದ್ದವು
ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ‘ಅಕ್ಷಯ ತೃತೀಯ’ ದಿನವಾದ ಭಾನುವಾರ ಕೂಡ ಹಾವೇರಿ ನಗರದಲ್ಲಿ ಜ್ಯುವೆಲರಿ ಮಳಿಗೆಗಳು ಮುಚ್ಚಿದ್ದವು   

ಹಾವೇರಿ: ಕೊರೊನಾ ಸೋಂಕು ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಚಿನ್ನ, ಬೆಳ್ಳಿ ಅಂಗಡಿಗಳು ಭಾನುವಾರ ಮುಚ್ಚಿದ್ದವು. ಹೀಗಾಗಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸುವ ಜನರ ಕನಸು ನನಸಾಗಲಿಲ್ಲ.

ನಗರದ ಗೀತಾ, ಕೆಜಿಪಿ, ಪೋತದಾರ್‌, ಮೇಘಾ, ವರ್ಧಮಾನ್‌, ದೀಪಕ್‌, ಪವನ್‌ ಸೇರಿದಂತೆ ವಿವಿಧ ಜ್ಯುವೆಲರಿ ಮಳಿಗೆಗಳಲ್ಲಿ ಅಕ್ಷಯ ತೃತೀಯ ದಿನದಂದು ಪ್ರತಿವರ್ಷ ಜನರು ತುಂಬಿ ತುಳುಕುತ್ತಿದ್ದರು. ಈ ಬಾರಿ ಚಿನ್ನ ಖರೀದಿ ಮತ್ತು ವ್ಯಾಪಾರದ ಮೇಲೆ ಕೊರೊನಾ ಕರಿನೆರಳು ಕವಿದಿತ್ತು.

‘ಈ ಶುಭ ದಿನದಂದು ಚಿನ್ನ ಖರೀದಿಸಿದರೆ ಒಳಿತಾಗುತ್ತದೆ; ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಹಿಂದೂ ಮತ್ತು ಜೈನ ಧರ್ಮದ ಜನರಲ್ಲಿ ಇರುವುದರಿಂದ ಚಿನ್ನಾಭರಣಗಳಿಗೆ ಬಹು ಬೇಡಿಕೆ ಬರುತ್ತಿತ್ತು. ವ್ಯಾಪಾರಿಗಳು ಕೂಡ ವಿಶೇಷ ರಿಯಾಯಿತಿ, ಮೇಕಿಂಗ್‌ ಶುಲ್ಕ ಮತ್ತು ವೇಸ್ಟೇಜ್‌ ಶುಲ್ಕದ ಮೇಲೆ ರಿಯಾಯಿತಿ ನೀಡುತ್ತಿದ್ದರು. ಆದರೆ, ಈ ಬಾರಿ ಅದರ ಸಂಭ್ರಮವನ್ನು ಕೋವಿಡ್‌–19 ಕಸಿದುಕೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.