ADVERTISEMENT

ಕೊರೊನಾ: ವೃದ್ಧಾಶ್ರಮದಲ್ಲೂ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 12:09 IST
Last Updated 3 ಏಪ್ರಿಲ್ 2020, 12:09 IST
ವಿಶಾಲ್‌ ಟಿ.ಠಕ್ಕರ್‌ ಕುಟುಂಬದವರು ಮಗು ಹುಟ್ಟಿದ ಸಂಭ್ರಮಕ್ಕಾಗಿ ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿರುವ ಶಕ್ತಿ ವೃದ್ಧಾಶ್ರಮದ ನಿವಾಸಿಗಳಿಗೆ ಸಿಹಿ ಹಂಚಿದರು 
ವಿಶಾಲ್‌ ಟಿ.ಠಕ್ಕರ್‌ ಕುಟುಂಬದವರು ಮಗು ಹುಟ್ಟಿದ ಸಂಭ್ರಮಕ್ಕಾಗಿ ಹಾವೇರಿಯ ನಾಗೇಂದ್ರನಮಟ್ಟಿಯಲ್ಲಿರುವ ಶಕ್ತಿ ವೃದ್ಧಾಶ್ರಮದ ನಿವಾಸಿಗಳಿಗೆ ಸಿಹಿ ಹಂಚಿದರು    

ಹಾವೇರಿ: ಕೊರೊನಾ ಸೋಂಕು ತಡೆಗಟ್ಟುಗಲು ಮತ್ತು ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ನಗರದ ನಾಗೇಂದ್ರನಮಟ್ಟಿಯ ‘ಶ್ರೀ ಶಕ್ತಿ ವೃದ್ಧಾಶ್ರಮ’ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

15 ಮಹಿಳೆಯರು ಮತ್ತು 10 ಪುರುಷರು ಸೇರಿದಂತೆ ಒಟ್ಟು 21 ಮಂದಿ ಇಲ್ಲಿ ವಾಸಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಮಾಸ್ಕ್‌ ಕೊಟ್ಟಿದ್ದೇವೆ. ನಿಯಮಿತವಾಗಿ ಸಾಬೂನಿನಿಂದ ಕೈ ತೊಳೆಯಲು ಸಲಹೆ ನೀಡಿದ್ದೇವೆ. ಯಾರೇ ಹೊರಗಡೆಯಿಂದ ಬಂದರೂ ಸ್ಯಾನಿಟೈಸರ್‌ ನೀಡಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುವಂತೆ ಸೂಚಿಸುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಲಾಗಿದೆ. ಕೊರೊನಾ ಬಗ್ಗೆ ಸಂಪೂರ್ಣ ಜಾಗೃತಿ ಮೂಡಿಸಿದ್ದೇವೆ ಎಂದು ವೃದ್ಧಾಶ್ರಮದ ಅಧೀಕ್ಷಕ ಕಾಳಪ್ಪ ಚಲವಾದಿ ತಿಳಿಸಿದರು.

ವೃದ್ಧಾಶ್ರಮಕ್ಕೆ ನೆರವು ನೀಡುವವರು ಮೊ: 88844 08130 ಸಂಪರ್ಕಿಸಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.