ADVERTISEMENT

ಹಾವೇರಿ: ಜಿಲ್ಲೆಯಲ್ಲಿ ಸಾವಿರ ಗಡಿ ದಾಟಿದ ಕೋವಿಡ್‌

ಜಿಲ್ಲೆಯಲ್ಲಿ 49 ಮಂದಿಗೆ ಸೋಂಕು ದೃಢ: 13 ಮಂದಿ ಗುಣಮುಖರಾಗಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:32 IST
Last Updated 1 ಆಗಸ್ಟ್ 2020, 16:32 IST
ಅಕ್ಕಿಆಲೂರು ಸಮೀಪದ ಮೂಡೂರು ಗ್ರಾಮದಲ್ಲಿ ಸೀಲ್‍ಡೌನ್ ಆದ ಪ್ರದೇಶದ ನಿವಾಸಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಅಗತ್ಯ ವಸ್ತುಗಳ ಕಿಟ್ ವಿತರಿಸಿದರು
ಅಕ್ಕಿಆಲೂರು ಸಮೀಪದ ಮೂಡೂರು ಗ್ರಾಮದಲ್ಲಿ ಸೀಲ್‍ಡೌನ್ ಆದ ಪ್ರದೇಶದ ನಿವಾಸಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಅಗತ್ಯ ವಸ್ತುಗಳ ಕಿಟ್ ವಿತರಿಸಿದರು   

ಹಾವೇರಿ: ಜಿಲ್ಲೆಯಲ್ಲಿ ಇಬ್ಬರುಶುಶ್ರೂಷಕಿಯರು ಸೇರಿದಂತೆ ಶನಿವಾರ 49 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಒಟ್ಟಾರೆ 1,040 ಪಾಸಿಟಿವ್‌ ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿವೆ.

ಶನಿವಾರ ಗುಣಮುಖರಾದ 13 ಮಂದಿ ಸೇರಿದಂತೆ ಇಂದಿನವರೆಗೆ 570 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 27 ಮಂದಿ ಮೃತಪಟ್ಟಿದ್ದಾರೆ. 443 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಸಂಜಯ ಬಿ.ಶೆಟ್ಟೆಣ್ಣವರ ತಿಳಿಸಿದ್ದಾರೆ.

ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ಬ್ಯಾಡಗಿ-2, ಹಾನಗಲ್-4, ಸವಣೂರು, ಹಿರೇಕೆರೂರು ಹಾಗೂ ರಾಣೇಬೆನ್ನೂರ ತಾಲ್ಲೂಕಿನಲ್ಲಿ ತಲಾ 6, ಶಿಗ್ಗಾವಿ -7 ಹಾಗೂ ಹಾವೇರಿ ತಾಲ್ಲೂಕಿನಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

ಬ್ಯಾಡಗಿ ತಾಲ್ಲೂಕು:ಬ್ಯಾಡಗಿ ಸಜ್ಜನಪೇಟೆ ಪ್ಲಾಟಿನ 50 ವರ್ಷದ ಮಹಿಳೆ, ಕುರ್ತಕೋಡಿಹಳ್ಳಿಯ 65 ವರ್ಷದ ಮಹಿಳೆ ಹಾಗೂ ಹಾನಗಲ್ ತಾಲ್ಲೂಕಿನ ಕಮತಗೇರಿಯ 35 ವರ್ಷದ ಮಹಿಳೆ, ಆಲೂರ ಓಣಿಯ 57 ವರ್ಷದ ಮಹಿಳೆ ಹಾಗೂ ವಿರಾಟನಗರದ 35 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರ ತಾಲ್ಲೂಕು:38 ವರ್ಷದ ಪುರುಷ, ಸುಣಕಲ್ಲಬಿದರಿಯ 25 ವರ್ಷದ ಯುವತಿ, ಗುಡ್ಡದಾನ್ವೇರಿಯ 30 ವರ್ಷದ ಪುರುಷ, ಎ.ಎನ್.ಸಿ. ದೇರಗುಡ್ಡದ 22 ವರ್ಷದ ಮಹಿಳೆ, ಸರ್ಕಾರಿ ಆಸ್ಪತ್ರೆ ವಸತಿ ಗೃಹದ 25 ವರ್ಷದ ಶುಶ್ರೂಷಕಿ, ಮೃತ್ಯುಂಜಯ ನಗರದ 30 ವರ್ಷದ ಮಹಿಳೆಗೆ ಸೋಂಕು ಖಚಿತವಾಗಿದೆ.

ಹಿರೇಕೆರೂರು ತಾಲ್ಲೂಕು:ತಂಬಾಕದ ಓಣಿಯ ಗುತ್ತಿಗೆದಾರ 43 ವರ್ಷದ ಪುರುಷ, ಮಾಸೂರ ಗ್ರಾಮದ 35 ವರ್ಷದ ಪುರುಷ ಹಾಗೂ 12 ವರ್ಷದ ಬಾಲಕಿ, ಬೆಟಕೇರೂರ ಗ್ರಾಮದ 34 ವರ್ಷದ ಮಹಿಳೆ, ಹಿರೇಕೆರೂರು ಬಸವೇಶ್ವರ ನಗರದ 58 ವರ್ಷದ ಪುರುಷ ಹಾಗೂ 48 ವರ್ಷದ ಮಹಿಳೆಗೆ ಕೋವಿಡ್‌ ದೃಢಗೊಂಡಿದೆ.

ಸವಣೂರ ತಾಲ್ಲೂಕು:ತೆವರಮೆಳ್ಳಿಹಳ್ಳಿಯ 70 ವರ್ಷದ ಪುರುಷ, ಅಂಬೇಡ್ಕರ ನಗರದ 26 ವರ್ಷದ ಯುವತಿ, ಹಾವಣಗಿ ಪ್ಲಾಟ್‍ನ 26 ವರ್ಷದ ಯುವಕ, ಸವಣೂರ ಮಾಲತೇಶ ನಗರದ 38 ವರ್ಷದ ಪುರುಷ, ಹಿರೇಮುಗದೂರ ಗ್ರಾಮದ 63 ವರ್ಷದ ಪುರುಷ ಹಾಗೂ 56 ವರ್ಷದ ಪುರುಷನಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಶಿಗ್ಗಾವಿ ತಾಲ್ಲೂಕು:ಬಂಕಾಪುರ ಸುಂಕದಕೇರಿಯ 52 ವರ್ಷದ ಪುರುಷ, ಸಾದಗಾರವಳ್ಳಿಯ 21 ವರ್ಷದ ಇಬ್ಬರು ವಿದ್ಯಾರ್ಥಿಗಳು, ಬಂಕಾಪುರ ಕೊಟ್ಟಿಗೇರಿಯ 44 ವರ್ಷದ ಪುರುಷ, ಬಂಕಾಪುರ ಶಾ ಬಜಾರಿನ 42 ವರ್ಷದ ಪುರುಷ, ಮಲ್ಲಿಕಾರ್ಜುನ ನಗರದ 46 ವರ್ಷದ ಸ್ಟಾಫ್ ನರ್ಸ್‍ಗೆ, ಬಂಕಾಪುರ ಕತೀಬ ನಗರದ 60 ವರ್ಷದ ಮಹಿಳೆಗೆ ವರದಿ ಪಾಸಿಟಿವ್‌ ಬಂದಿದೆ.

ಹಾವೇರಿ ತಾಲ್ಲೂಕು:ಚಿಕ್ಕಲಿಂಗದಹಳ್ಳಿಯ 68 ವರ್ಷದ ಪುರುಷ, 58 ವರ್ಷದ ಮಹಿಳೆ, ಹಾವೇರಿ ಅಶ್ವಿನಿ ನಗರದ 50 ವರ್ಷದ ಮಹಿಳೆ, ರಾಜೇಂದ್ರನಗರದ 46 ವರ್ಷದ ಪುರುಷ, ರಾಜೇಂದ್ರನಗರದ 57 ವರ್ಷದ ಮಹಿಳೆ, ಗುತ್ತಲದ 55 ವರ್ಷದ ಮಹಿಳೆ, ಅಶ್ವಿನಿಗರದ 28 ವರ್ಷದ ಪುರುಷ, 42 ವರ್ಷದ ಮಹಿಳೆ, 12 ವರ್ಷದ ಬಾಲಕಿ, 14 ವರ್ಷದ ಬಾಲಕಿ, 48 ವರ್ಷದ ಪುರುಷ, ಶಿವಯೋಗೇಶ್ವರ ನಗರದ 19 ವರ್ಷದ ಯುವತಿ, ದೇಸಾಯಿಗಲ್ಲಿ 43 ವರ್ಷದ ಪುರುಷ, ಸಿದ್ಧಾರೋಡ ಕಾಲೊನಿಯ 65 ವರ್ಷದ ಪುರುಷ, ಚಿಕ್ಕಲಿಂಗದಳ್ಳಿಯ 38 ವರ್ಷದ ಪುರುಷ, 60 ವರ್ಷದ ಪುರುಷ, 52 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಗುಣಮುಖರ ವಿವರ:ಹಿರೇಕೆರೂರು-1, ಶಿಗ್ಗಾವಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ತಲಾ-2, ಹಾವೇರಿ ತಾಲ್ಲೂಕಿನ 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.