ಹಾವೇರಿ: ಆರೋಗ್ಯ ಇಲಾಖೆ ನೌಕರರು ಸೇರಿದಂತೆಜಿಲ್ಲೆಯಲ್ಲಿ ಶನಿವಾರ 58 ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ ಒಟ್ಟಾರೆ 10,016 ಮಂದಿಗೆ ಕೋವಿಡ್ ದೃಢಪಟ್ಟಿದೆ.
ತಾಲ್ಲೂಕುವಾರು ವಿವರ:
ಬ್ಯಾಡಗಿ–4, ಹಾನಗಲ್–18, ಹಾವೇರಿ–13, ಹಿರೇಕೆರೂರು–8, ರಾಣೆಬೆನ್ನೂರು–12, ಸವಣೂರು ತಾಲ್ಲೂಕಿನಲ್ಲಿ 3 ಮಂದಿಗೆ ಕೋವಿಡ್ ದೃಢಪಟ್ಟಿದೆ.
ಬ್ಯಾಡಗಿ–9, ಹಾನಗಲ್–2, ಹಾವೇರಿ–14, ಹಿರೇಕೆರೂರು–5, ರಾಣೆಬೆನ್ನೂರು–9, ಸವಣೂರು–2 ಮಂದಿ ಸೇರಿದಂತೆ ಒಟ್ಟಾರೆ 41 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು.
ಮರಣದ ವಿವರ:
ಗದಗ ಜಿಲ್ಲೆಯ ಬಿಜ್ಜೂರು ಗ್ರಾಮದ 64 ವರ್ಷದ ಪುರುಷ ಮತ್ತು ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಆಡೂರು ಗ್ರಾಮದ 70 ವರ್ಷದ ಮಹಿಳೆಗೆ ಕೋವಿಡ್ ದೃಢಪಟ್ಟು, ಇವರ ಮರಣವನ್ನು ಶನಿವಾರ ದೃಢೀಕರಿಸಲಾಗಿದೆ.
ಕೋವಿಡ್ ಅಂಕಿಅಂಶ
ಜಿಲ್ಲೆಯಲ್ಲಿ ಒಟ್ಟು:10,016
ಸಕ್ರಿಯ ಪ್ರಕರಣ:599
ಗುಣಮುಖ:9,235
ಸಾವು:182
ಈ ದಿನದ ಏರಿಕೆ
ಹೊಸ ಪ್ರಕರಣ:58
ಗುಣಮುಖ:41
ಸಾವು:02
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.