ADVERTISEMENT

ಹಾವೇರಿ: ಬ್ಯಾಂಕ್‌ ನೌಕರ ಸೇರಿ 12 ಮಂದಿಗೆ ಕೋವಿಡ್‌

ಸಕ್ರಿಯ ಪ್ರಕರಣ ಇಳಿಮುಖ, ಗುಣಮುಖ ಹೆಚ್ಚಳ; 33 ಮಂದಿ ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:10 IST
Last Updated 16 ಜುಲೈ 2020, 17:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಕೆನರಾ ಬ್ಯಾಂಕ್ ನೌಕರಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 33 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 334 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 244 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಈವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ. 83 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ನೀಡಿದ್ದಾರೆ.

ಗುರುವಾರ ಹಾವೇರಿ ನಗರದ 11 ಹಾಗೂ ರಾಣೆಬೆನ್ನೂರು ನಗರದ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಕೆನರಾ ಬ್ಯಾಂಕ್ ಉದ್ಯೋಗಿ 33 ವರ್ಷದ ಪುರುಷ(ಎಚ್.ವಿ.ಆರ್-318) ಲಕ್ಷ್ಮೇಶ್ವರದಿಂದ ಹಾವೇರಿಗೆ ಹೋಗಿ ಬಂದವನಾಗಿರುತ್ತಾನೆ. ಜುಲೈ 14 ರಂದು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿರುತ್ತದೆ.ಶಿವಬಸವನಗರ ಕಂಟೈನ್ ಮೆಂಟ್ ಜೋನ್‍ನ ಪಿ-25371 ಸೋಂಕಿತನ ಸಂಪರ್ಕಿತ 31 ವರ್ಷದ ಮಹಿಳೆ (ಎಚ್.ವಿ.ಆರ್.-319), ಮೆಹಬೂಬನಗರದ 38 ವರ್ಷದ ಪುರುಷ (ಎಚ್.ವಿ.ಆರ್-320), 22 ವರ್ಷದ ಮಹಿಳೆ (ಎಚ್.ವಿ.ಆರ್-321), 26 ವರ್ಷದ ಮಹಿಳೆ (ಎಚ್.ವಿ.ಆರ್-322), 6 ವರ್ಷದ ಬಾಲಕ (ಎಚ್.ವಿ.ಆರ್-323), 32 ವರ್ಷದ ಮಹಿಳೆ (ಎಚ್.ವಿ.ಆರ್-324), 35 ವರ್ಷದ ಮಹಿಳೆ (ಎಚ್.ವಿ.ಆರ್-325), 65 ವರ್ಷದ ಮಹಿಳೆ (ಎಚ್.ವಿ.ಆರ್-326), 8 ವರ್ಷದ ಬಾಲಕ (ಎಚ್.ವಿ.ಆರ್-327), 4 ವರ್ಷದ ಬಾಲಕ (ಎಚ್.ವಿ.ಆರ್-328) ಹಾಗೂ ರಾಣೆಬೆನ್ನೂರಿನ ಮಾರುತಿ ನಗರದ ಐ.ಎಲ್.ಐ ಲಕ್ಷಣ ಹೊಂದಿದ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ‘ಕಂಟೈನ್ಮೆಂಟ್‌ ಜೋನ್‌’ ಎಂದು ಘೋಷಿಸಲಾಗಿದೆ ಹಾಗೂ ನಿವಾಸದ 200 ಮೀಟರ್‌ ಪ್ರದೇಶವನ್ನು ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ. ಇನ್ಸಿಡೆಂಟಲ್ ಕಮಾಂಡರ್ ಆಗಿ ಆಯಾ ತಾಲ್ಲೂಕು ತಹಶೀಲ್ದಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಹಾವೇರಿ-14, ಶಿಗ್ಗಾವಿ-6, ಬ್ಯಾಡಗಿ ಹಾಗೂ ಹಾನಗಲ್ ತಾಲ್ಲೂಕಿನ ತಲಾ ನಾಲ್ಕು, ಸವಣೂರು-3, ಹಿರೇಕೆರೂರು-2 ಮಂದಿ ಸೇರಿ 33 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.