ಹಾವೇರಿ: ಆರೋಗ್ಯ ಹಾಗೂ ಪೊಲೀಸ್ ಇಲಾಖೆ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಮಂಗಳವಾರ 172 ಮಂದಿಗೆಕೋವಿಡ್-19 ದೃಢಪಟ್ಟಿದೆ ಹಾಗೂ 401 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ತಾಲ್ಲೂಕುವಾರು ವಿವರ:ಬ್ಯಾಡಗಿ-25, ಹಾನಗಲ್ 8, ಹಾವೇರಿ-64, ಹಿರೇಕೆರೂರು-24, ರಾಣೆಬೆನ್ನೂರು-26, ಸವಣೂರು-5, ಶಿಗ್ಗಾವಿ-20 ಮಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-5, ಹಾನಗಲ್-18, ಹಾವೇರಿ-40, ಹಿರೇಕೆರೂರು-124, ರಾಣೆಬೆನ್ನೂರು-171, ಶಿಗ್ಗಾವಿ-37 ಹಾಗೂ ಇತರೆ ಆರು ಮಂದಿ ಬಿಡುಗಡೆ ಹೊಂದಿದ್ದಾರೆ.
ಮರಣ:ರಟ್ಟೀಹಳ್ಳಿಯ 78 ವರ್ಷದ ಪುರುಷ, ರಾಣೆಬೆನ್ನೂರು ತಾಲ್ಲೂಕು ಪತ್ತೆಪುರದ 68 ವರ್ಷದ ಪುರುಷ, ರಾಣೆಬೆನ್ನೂರು ನಗರದ 56 ವರ್ಷದ ಮಹಿಳೆ ಹಾಗೂ ಹಾವೇರಿ ಬಸವೇಶ್ವರ ನಗರದ 63 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.