ADVERTISEMENT

ಹಾವೇರಿ: ವೈದ್ಯ ಸೇರಿ 155 ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:16 IST
Last Updated 3 ಸೆಪ್ಟೆಂಬರ್ 2020, 15:16 IST
ಹಾವೇರಿ ಜಿಲ್ಲಾಸ್ಪತ್ರೆ
ಹಾವೇರಿ ಜಿಲ್ಲಾಸ್ಪತ್ರೆ   

ಹಾವೇರಿ: ಸರ್ಕಾರಿ ವೈದ್ಯ, ನೇತ್ರಾಧಿಕಾರಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ನೌಕರರು ಒಳಗೊಂಡಂತೆ ಜಿಲ್ಲೆಯಲ್ಲಿ ಗುರುವಾರ 155 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ:

ಸವಣೂರು-9, ಬ್ಯಾಡಗಿ-12, ಹಿರೇಕೆರೂರು-19, ಹಾವೇರಿ-21, ಹಾನಗಲ್ ಹಾಗೂ ಶಿಗ್ಗಾವಿ ತಲಾ 24, ರಾಣೆಬೆನ್ನೂರು-44 ಹಾಗೂ ಇತರೆ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ADVERTISEMENT

ಸೋಂಕಿನಿಂದ ಗುಣಮುಖರಾಗಿ ಹಿರೇಕೆರೂರು-2, ಹಾನಗಲ್-8, ಸವಣೂರು-9, ಹಾವೇರಿ-15, ಬ್ಯಾಡಗಿ-17, ರಾಣೆಬೆನ್ನೂರು-18, ಶಿಗ್ಗಾವಿ ತಾಲ್ಲೂಕಿನ 32 ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣ:

ರಾಣೆಬೆನ್ನೂರು ತಾಲ್ಲೂಕಿನ ಹೊನ್ನತ್ತಿ ಗ್ರಾಮದ 70 ವರ್ಷದ ಮಹಿಳೆ, ಹಿರೇಕೆರೂರು ತಾಲ್ಲೂಕು ದೊಡ್ಡಗುಬ್ಬಿ ಗ್ರಾಮದ 72 ವರ್ಷದ ಪುರುಷ, ಶಿಗ್ಗಾವಿ ತಾಲ್ಲೂಕು ಚಾಕಾಪುರದ 45 ವರ್ಷದ ಪುರುಷ ಹಾಗೂ ಬ್ಯಾಡಗಿ ತಾಲ್ಲೂಕಿನ ಕಾಟೇನಹಳ್ಳಿಯ 70 ವರ್ಷದ ಪುರುಷ ಸೇರಿದಂತೆ ನಾಲ್ವರು ಕೋವಿಡ್‌ನಿಂದ ಮೃತಪಟ್ಟಿರುವುದನ್ನು ದೃಢೀಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.