ADVERTISEMENT

ಜಿಯೊ ಪೆಟ್ರೋಲ್‌ ಬಂಕ್‌ ಹೆಸರಿನಲ್ಲಿ ಆಮಿಷ: ₹ 56.27 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:10 IST
Last Updated 13 ಜನವರಿ 2026, 3:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ಬ್ಯಾಡಗಿ: ಕಡಿಮೆ ಬೆಲೆಗೆ ಜಿಯೊ ಪೆಟ್ರೋಲ್‌ ಬಂಕ್‌ ತೆರೆಯುವ ಅವಕಾಶದ ಆಮಿಷವೊಡ್ಡಿ ಅಪರಿಚಿತರು ಆರ್‌ಟಿಜಿಎಸ್‌ ಮೂಲಕ ₹ 56.27 ಲಕ್ಷ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆ ಕಾಗಿನೆಲೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಈಚೆಗೆ ಪತ್ತೆಯಾಗಿದೆ.

ADVERTISEMENT

ತಾಲ್ಲೂಕಿನ ಮತ್ತೂರು ಗ್ರಾಮದ ಚನ್ನಬಸನಗೌಡ ಬಸನಗೌಡ ಪಾಟೀಲ ಹಣ ಕಳೆದುಕೊಂಡವರು.

ಮೊಬೈಲ್‌ನಲ್ಲಿ ಯೂಟ್ಯೂಬ್‌ ನೋಡುವ ಸಂದರ್ಭದಲ್ಲಿ ಕಡಿಮೆ ಬೆಲೆಯಲ್ಲಿ ಜಿಯೊ ಪೆಟ್ರೋಲ್‌ ಬಂಕ್‌ ತೆರೆಯುವ ಅವಕಾಶದ ಕುರಿತು ಮಾಹಿತಿ ಸಿಕ್ಕಿತು. ಅದನ್ನು ಗೂಗಲ್‌ನಲ್ಲಿ ಸರ್ಚ್‌ ಮಾಡಿ ಅರ್ಜಿ ಹಾಕಿದ ಬಳಿಕ ಅನಾಮಧೇಯ ವ್ಯಕ್ತಿಗಳು ಮೊ: 9038441836, 8809704349 ಹಾಗೂ 8413801853 ಮೂಲಕ ನಿರಂತರವಾಗಿ ಸಂಪರ್ಕಿಸಿದರು. ಅವರು ಹಂತ ಹಂತವಾಗಿ ಆರ್‌ಟಿಜಿಎಸ್‌ ಮೂಲಕ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾರೆ. ನಂಬಿಕೆ ಬರುವ ಹಾಗೆ ಆನ್‌ಲೈನ್‌ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ದಾಖಲಾತಿಗಳನ್ನು ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಿದ್ದಾರೆ ಎಂದು ಚನ್ನಬಸನಗೌಡ ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ 2025ರ ಮಾರ್ಚ್‌ 7ರಂದು ನಡೆದಿದ್ದು, ಈಚೆಗೆ ದೂರು ದಾಖಲಾಗಿದೆ ಎಂದು ಕಾಗಿನೆಲೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ತನಿಖೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.