ADVERTISEMENT

ಸವಣೂರು: ದಸರಾ ರಜೆ ನೀಡದ ಶಾಲೆಗಳ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 2:58 IST
Last Updated 28 ಸೆಪ್ಟೆಂಬರ್ 2025, 2:58 IST
ದಸರಾ ರಜೆ ನೀಡದ ಸವಣೂರು ಪಟ್ಟಣದ ಎಸ್.ಎಫ್.ಎಸ್ ಕಾನ್ವೆಂಟ್ ಶಾಲೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಇಓ ಎಂ.ಎಫ್.ಬಾರ್ಕಿ ಅವರ ಮೂಲಕ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು
ದಸರಾ ರಜೆ ನೀಡದ ಸವಣೂರು ಪಟ್ಟಣದ ಎಸ್.ಎಫ್.ಎಸ್ ಕಾನ್ವೆಂಟ್ ಶಾಲೆಯ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಇಓ ಎಂ.ಎಫ್.ಬಾರ್ಕಿ ಅವರ ಮೂಲಕ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು   

ಸವಣೂರು: ಎಸ್.ಎಫ್.ಎಸ್ ಕಾನ್ವೆಂಟ್ ಶಾಲೆಯಲ್ಲಿ ದಸರಾ ರಜೆ ನೀಡಿಲ್ಲ. ಹಿಂದೂ ಹಬ್ಬಗಳನ್ನು ಕಡೆಗಣಿಸಲಾಗುತ್ತಿದ್ದು, ಕೇವಲ ಕ್ರೈಸ್ತರ ಹಬ್ಬಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಇಂತಹ ಶಾಲೆಯ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ಕೈಗೊಂಡು ಬಿಇಒ ಎಂ.ಎಫ್.ಬಾರ್ಕಿ ಅವರ ಮೂಲಕ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು.

ದಸರಾ (ವಿಜಯದಶಮಿ) ಆಚರಣೆಗೆ ಸರ್ಕಾರ ಶಾಲಾ- ಕಾಲೇಜುಗಳಿಗೆ 15 ದಿನಗಳ ರಜೆ ಘೋಷಿಸಿದೆ. ಆದರೆ, ಕಾನ್ವೆಂಟ್ ಶಾಲೆಗಳಲ್ಲಿ ರಜೆ ನೀಡುತ್ತಿಲ್ಲ. ಈ ಶಾಲೆಗಳಲ್ಲಿ ಗಾಂಧೀಜಿ, ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಸವೇಶ್ವರ ಭಾವಚಿತ್ರ ಕೂಡ ಹಾಕದೆ ಸರ್ಕಾರದ ಸೂಚನೆ ಪಾಲಿಸಲಾಗುತ್ತಿಲ್ಲ. ಕೆಲವೊಂದು ಕಡೆ ರಾಷ್ಟ್ರೀಯ ಹಬ್ಬಗಳ ಆಚರಣೆಯು ಮಾಡುತ್ತಿಲ್ಲ. ಇವುಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗದಿಗೆಪ್ಪ ಕುರವತ್ತಿ, ಮಹೇಶ ಮುದಗಲ್, ಪ್ರವೀಣ ಚರಂತಿಮಠ, ಕಿರಣ ದೊಡ್ಡಮನಿ, ಪ್ರವೀಣ ಬಾಲೇಹೊಸೂರ, ಶ್ರೀನಿವಾಸ ಗಿತ್ತೆ, ಸಮೀತ ಕೆಮ್ಮಣಕೇರಿ, ವಿನಾಯಕ ಕುಲಕರ್ಣಿ, ವೀರೇಶ ಕಳಕಪ್ಪನವರ, ಸಂತೋಷ ಕೆಂಚನಗೌಡ್ರ, ವಿನಾಯಕ ವಾಲಿಶೆಟ್ಟರ, ಗಜಾನನ ರಾಶಿನಕರ, ಅರುಣ ಬೋವಿ, ಮಾಂತೇಶ ಮಾನೇಗಾರ, ಪ್ರವೀಣ ಆರೇರ, ಪವನ ರಸಾಳಕರ, ಮಾಂತೇಶ ಗಡಗದಲಿ, ರವಿ ಗಡಗದಲಿ, ಶಂಭು ಕಲ್ಮಠ, ಪರಶು, ಕುಮಾರ ಉಪ್ಪಿನ, ಅಭಿ ಬೋವಿ, ಮಹೇಶ ಬೋವಿ, ರಘು ಗಡಗದಲಿ, ನವೀನ ಶಿರಸಂಗಿ, ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.