ರಾಣೆಬೆನ್ನೂರು: ಬೈಕಿಗೆ ಹಿಂದಿನಿಂದ ಲಾರಿ ಗುದ್ದಿದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮೇಡ್ಲೇರಿ ಗ್ರಾಮದ ಹುಲಿಗೆಮ್ಮ ಚಿಕ್ಕಪ್ಪ ಕೂನಬೇವು (24) ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಹಲಗೇರಿ ವೃತ್ತದ ಬಳಿ ನಡೆದಿದೆ.
ಅವರ ಪತಿ ಬೈಕ್ ಸವಾರ ಚಿಕ್ಕಪ್ಪ ಕೂನಬೇವು ಅವರ ಕಾಲಿಗೆ ಪೆಟ್ಟಾಗಿದೆ. ಪುತ್ರರಾದ ವಿಷ್ಣು ಮತ್ತು ಮಾಲತೇಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಹಲಗೇರಿಗೆ ಹೋಗುತ್ತಿದ್ದರು. ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.