ADVERTISEMENT

ಶಿಗ್ಗಾವಿ: ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:38 IST
Last Updated 16 ಮೇ 2025, 14:38 IST
ಶಿಗ್ಗಾವಿ ಪಟ್ಟಣದಲ್ಲಿ ನಿಮರ್ಾಣದ ಜಿ+1 ಮನೆಗಳನ್ನು ವಿತರಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ) ಪದಾಧಿಕಾರಿಗಳು, ಮನೆ ಫಲಾನುಭವಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್ ಅವರಿಗೆ ಮನವಿ ಸಲ್ಲಿಸಿದರು.
ಶಿಗ್ಗಾವಿ ಪಟ್ಟಣದಲ್ಲಿ ನಿಮರ್ಾಣದ ಜಿ+1 ಮನೆಗಳನ್ನು ವಿತರಿಸುವಂತೆ ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ) ಪದಾಧಿಕಾರಿಗಳು, ಮನೆ ಫಲಾನುಭವಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್ ಅವರಿಗೆ ಮನವಿ ಸಲ್ಲಿಸಿದರು.   

ಶಿಗ್ಗಾವಿ: ಪಟ್ಟಣದಲ್ಲಿ ನಿರ್ಮಾಣವಾಗಿರುವ ಜಿ+1 ಮನೆಗಳನ್ನು ಜೂನ್ 5ರ ಒಳಗೆ ಹಂಚಿಕೆ ಮಾಡದಿದ್ದರೆ, ಆ ಮನೆಗಳ ಫಲಾನುಭವಿಗಳೇ ಮನೆ ಬೀಗ ಒಡೆದು ನೇರಪ್ರವೇಶ ಮಾಡಲಿದ್ದಾರೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಪದಾಧಿಕಾರಿಗಳು ಮತ್ತು ಜಿ+1ಮನೆಗಳ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ತಿಳಿಸಿದರು.

ಈ ಸಂಬಂಧ ಡಿವೈಎಫ್ಐ ಪದಾಧಿಕಾರಿಗಳು, ಮನೆ ಫಲಾನುಭವಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಅವರಿಗೆ ಮನವಿ ಸಲ್ಲಿಸಿದರು.

ಡಿವೈಎಫ್ಐ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ಸುಮಾರು 10-12 ವರ್ಷಗಳಿಂದ ಮನೆ ಸಿಗುವ ಭರವಸೆಯಲ್ಲಿ ಬಾಡಿಗೆ ಮನೆಯಲ್ಲಿ ಕಾಲಕಳೆಯುತ್ತಿರುವ ಅರ್ಹ ಫಲಾನುಭವಿಗಳು ಮನೆಗಾಗಿ ಇಂದು ಪರದಾಡುತ್ತಿದ್ದಾರೆ. ಸುಮಾರು 45 ಸಾವಿರ ವಂತಿಗೆ ಹಣ ತುಂಬಿದ್ದಾರೆ. ಆದರೂ ಮನೆಗಳ ಹಂಚಿಕೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ತಕ್ಷಣ ಮನೆ ವಿತರಣೆ ಮಾಡಬೇಕು. ಇಲ್ಲವೇ ಅರ್ಹ ಫಲಾನುಭವಿಗಳೇ ಬೀಗ ಒಡೆದು ನೇರಪ್ರವೇಶ ಮಾಡಲಿದ್ದಾರೆ’ ಎಂದು ಎಚ್ಚರಿಸಿದರು.

ADVERTISEMENT

ಪುರಸಭೆ ಸದಸ್ಯ ಪರಶುರಾಮ ಸೊನ್ನದ ಮಾತನಾಡಿ, ‘ತಕ್ಷಣ ಮನೆ ವಿತರಣೆ ಮಾಡದಿದ್ದರೆ ಫಲಾನುಭವಿಗಳೊಂದಿಗೆ ಪ್ರತಿಭೆನೆ ಮಾಡಲು ಸಿದ್ಧವಾಗಿದ್ದೇವೆ. ಅವರು ನೀಡಿದ ಗಡುವಿನ ಒಳಗಾಗಿ ಮನೆ ವಿತರಣೆ ಮಾಡಬೇಕು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಮನವಿ ಸ್ವೀಕರಿಸಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಸದ್ಯ ಸಭೆ ಕರೆದು ಚರ್ಚಿಸಿ ಮನೆ ಹಂಚಿಕೆ ಮಾಡಲಾಗುತ್ತದೆ. ಅರ್ಧ ಹಣ ಕಟ್ಟಿದವರು ಪೂರ್ಣ ಹಣ ಕಟ್ಟಬೇಕು ಎಂದರು.

ಡಿವೈಎಫ್ಐ ಪದಾಧಿಕಾರಿಗಳು ಮತ್ತು ಜಿ+1ಮನೆಗಳ ಹೋರಾಟ ಸಮಿತಿ ಪದಾಧಿಕಾರಿಗಳಾದ ವೀರಣ್ಣ ಗಡ್ಡಿ, ಮೌಲಾಲಿ ನವಲಗುಂದ, ಆಶ್ಮಾ ದೇವಸೂರ, ರಾಮದಾಸ ಶೇರಖಾನ್, ಭಾರತಿ ಪುಜಾರ, ರೇಣುಕಾ ಪೊಪಳೆ, ಕಿಶೂರ ದೋತ್ರೆ, ಮಂಜುಳಾ ತಡಸ, ವಿಜಯಲಕ್ಷ್ಮೀ ಅಂಬಿಗೇರ, ಗಾಯತ್ರಿ ಮಾಳೋದೆ, ಸಮಿತಿ ಎಲ್ಲ ಸದಸ್ಯರು, ಫಲಾನುಭವಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.