ADVERTISEMENT

ಯೋಗದಿಂದ ಕಾಯಿಲೆ ದೂರ: ಕಬ್ಬಕ್ಕಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 15:07 IST
Last Updated 4 ಜನವರಿ 2025, 15:07 IST
ಹಂಸಬಾವಿಯ ಮೃತ್ಯುಂಜಯ ವಿದ್ಯಾಪೀಠದ ಶಿವಯೋಗೀಶ್ವರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಯೋಗ ತರಬೇತಿ ಶಿಬಿರ ನಡೆಯಿತು
ಹಂಸಬಾವಿಯ ಮೃತ್ಯುಂಜಯ ವಿದ್ಯಾಪೀಠದ ಶಿವಯೋಗೀಶ್ವರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಯೋಗ ತರಬೇತಿ ಶಿಬಿರ ನಡೆಯಿತು   

ಹಂಸಬಾವಿ: ‘ನಿರಂತರವಾಗಿ ಯೋಗ ಮಾಡುವುದರಿಂದ ಮನುಷ್ಯನಿಗೆ ಎದುರಾಗುವ ಮಾರಣಾಂತಿಕ ಕಾಯಿಲೆಗಳನ್ನು ದೂರ ಮಾಡಬಹುದು, ಹಾಗೂ ದೀರ್ಘಾಯುಷ್ಯ ಪಡೆಯಬಹುದು’ ಎಂದು ಯೋಗ ತರಬೇತುದಾರ ಪಿ.ಆರ್.ಕಬ್ಬಕ್ಕಿ ಹೇಳಿದರು.

ಇಲ್ಲಿನ ಮೃತ್ಯುಂಜಯ ವಿದ್ಯಾಪೀಠದ ಶಿವಯೋಗೀಶ್ವರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ಯೋಗ ಶಿಕ್ಷಣ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ.ಕೆರೂಡಿ ಮಾತನಾಡಿ, ‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗದ ಅವಶ್ಯಕತೆ ಇದೆ. ಇಂದಿನ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಸ್ಥೂಲಕಾಯ ದೇಹ ರಚನೆಯಾಗುತ್ತಿದ್ದು, ನಿರಂತರ ಯೋಗ ಅಭ್ಯಾಸದಿಂದ ಆರೋಗ್ಯಯುತ, ಸಮತೋಲಿತ ದೇಹ ಹೊಂದಬಹುದು’ ಎಂದರು.

ADVERTISEMENT

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್.‌ವಿ.ಪಾಟೀಲ, ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯ ಎಸ್.‌ಕೆ.ಚನ್ನವೀರಗೌಡ್ರ, ಮುಖ್ಯ ಶಿಕ್ಷಕಿ ಲಾವಣ್ಯ ಮಡಿವಾಳರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.