ADVERTISEMENT

ದುಶ್ಚಟಗಳ ದಾಸರಾಗಬೇಡಿ: ಚೌಡಯ್ಯ ಶ್ರೀ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 2:39 IST
Last Updated 16 ಆಗಸ್ಟ್ 2025, 2:39 IST
ಗುತ್ತಲದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಅಂಬಿಗರ ಚೌಡಯ್ಯನ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯವರನ್ನು ಸನ್ಮಾನಿಸಿದರು
ಗುತ್ತಲದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಅಂಬಿಗರ ಚೌಡಯ್ಯನ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯವರನ್ನು ಸನ್ಮಾನಿಸಿದರು   

ಗುತ್ತಲ: ಯುವಕರು ದುಶ್ಚಟಗಳ ದಾಸರಾಗಬೇಡಿ ಎಂದು ನಿಜಶರಣ ಅಂಬಿಗರ ಚೌಡಯ್ಯನ ಗುರುಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಶುಕ್ರವಾರ ಅವರ ಜನ್ಮದಿನದ ಪ್ರಯುಕ್ತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ರೋಗಿಗಳಿಗೆ ಹಣ್ಣು ವಿತರಣೆ ಮಾಡಿ ವೈದ್ಯಾಧಿಕಾರಿಗಳಿಂದ ಸನ್ಮಾನ ಸ್ವಿಕರಿಸಿ ಮಾತನಾಡಿದರು.

‘ಜನ್ಮದಿನವನ್ನು ಅದ್ದೂರಿಯಾಗಿ ಮಾಡಬೇಡಿ. ಸಸಿ ನೆಡುವುದರ ಮೂಲಕ, ನೊಂದವರ ಮಧ್ಯ ಅವರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಆಚರಣೆ ಮಾಡಿ’ ಎಂದು ಅವರು ಹೇಳಿದರು.

ADVERTISEMENT

ಪಟ್ಟಣ ಪಂಚಾಯತಿ ಅಧ್ಯಕ್ಷ ಮಾಳವ್ವ ಗೊರವರ, ಸದಸ್ಯ ದೀಪಾ ಭರಡಿ, ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಹಾವನೂರ, ಡಾ.ದೀಪ್ತಿ, ಡಾ.ಕಿರಣ, ಗುರುರಾಜ ನೆಗಳೂರ, ಹನಮಂತ ಅಗಸಿಬಾಗಿಲು, ಪೀಠದ ಧರ್ಮದರ್ಶಿ ಪ್ರವೀಣ ವಡ್ನಿಕೊಪ್ಪ, ಮುತ್ತಣ್ಣ ಹಿರೆಣ್ಣನವರ, ಯೋಗರಾಜ ಎಚ್.ಕೆ., ರವಿಕುಮಾರ ಆರ್.ಬಿ, ಬಸವರಾಜಪ್ಪ ಕುಂಬಳೂರ, ಪುಟ್ಟಪ್ಪ ಕುಂಬಳೂರ, ಆರ್.ಎಚ್. ಐರಣಿ, ಎಸ್.ಎನ್. ಮೇಡ್ಲೇರಿ, ದುರಗಪ್ಪ ಬಾರ್ಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.