ADVERTISEMENT

ಶಿಗ್ಗಾವಿ: ದುರ್ಗಾದೇವಿ ಮೂರ್ತಿ ಮೆರವಣಿಗೆ ಸಂಭ್ರಮ

ದುರ್ಗಾದೇವಿ ಮೂರ್ತಿ ಪ್ರಾಣಪ್ರತಿಷ್ಠಾಪನೆ, ದೇವಸ್ಥಾನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 2:25 IST
Last Updated 11 ಆಗಸ್ಟ್ 2025, 2:25 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ದುರ್ಗಾದೇವಿ ಮೂರ್ತಿ ಮೆರವಣಿಗೆ ಜರುಗಿತು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ದುರ್ಗಾದೇವಿ ಮೂರ್ತಿ ಮೆರವಣಿಗೆ ಜರುಗಿತು   

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಭಾನುವಾರ ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ದುರ್ಗಾದೇವಿ ಮೂರ್ತಿ ಮೆರವಣಿಗೆ ಭಕ್ತ ಸಮೂಹದ ನಡುವೆ ಸಡಗರದಿಂದ ನಡೆಯಿತು.

ಮುನವಳ್ಳಿ ಹದ್ದಿನಲ್ಲಿರುವ ತೋಪಿನ ದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಖನೋಜಗಲ್ಲಿನ ತೋಪಿನ ದುರ್ಗಾದೇವಿ ದೇವಸ್ಥಾನದವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹಿಡಿದು ಪಾಲ್ಗೊಂಡಿದ್ದರು. ಜಾಂಝ್‌ ಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭವದೊಂದಿಗೆ ಜರುಗಿತು.

ಮೆರವಣಿಗೆಯ ಸ್ವಾಗತಕ್ಕಾಗಿ ಪ್ರಮುಖ ಬೀದಿಗಳನ್ನು ಬಾಳೆ, ತೆಂಗು ಹಾಗೂ ಮಾವಿನ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಬಣ್ಣದ ಪರಪರೆಗಳನ್ನು ಕಟ್ಟಲಾಗಿತ್ತು. ಮನೆ ಅಂಗಳದಲ್ಲಿ ಬಣ್ಣದ ರಂಗೋಲಿ ಹಾಕಲಾಗಿತ್ತು. ವಿವಿಧ ಗಣ್ಯರು, ಮಹಿಳೆಯರು, ಮಕ್ಕಳೆ ಸೇರಿದಂತೆ ಭಕ್ತ ಸಮೂಹ ಹಣ್ಣುಕಾಯಿ, ಹೂಹಾರ ಹಾಕಿ ದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಅರ್ಚಕರಾದ ಸುಮಂತ ಪೂಜಾರ, ಲಕ್ಷ್ಮಣ ಪೂಜಾರ, ಮುಖಂಡರಾದ ಪ್ರತಾಂಪಸಿಂಗ, ಶಿವಪ್ಪನವರ, ರಮೇಶ ಚವ್ಹಿ, ರಾಘವೇಂದ್ರ ಬಾಪುಸಿಂಗನವರ, ಮಾಲತೇಶ ಬಾಬುಸಿಂಗನವರ, ನಾರಾಯಣಸಿಂಗ ಕಲಘಟಗಿ, ಸಂಚು ಬಾಬುಸಿಂಗನವರ, ನಾರಾಯಣಪ್ಪ ಕೆರಪ್ಪನವರ, ರಾಜು ತೋಪನವರ, ರತನ್ ತೋಪನವರ, ಕೃಷ್ಣಾ ಕೇಸರಸಿಂಗ, ಭರತ ಚವ್ಹಿ, ಹರಿಷ ಭವಾನಿ, ದುರ್ಗಾಸಿಂಗ ಕಲಘಟಗಿ, ವಿನಾಯಕ ಪೂಜಾರ, ವೆಂಕಟೇಶ ಪಾಂಡೆ ಸೇರಿದಂತೆ ದೇವಸ್ಥಾನ ಸೇವಾ ಸಮಿತಿ ಸದಸ್ಯರು, ಮುನವಳ್ಳಿ, ಬಂಕಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.