ರಟ್ಟೀಹಳ‍್ಳಿ: ಸ್ಥಳೀಯ ಪಟ್ಟಣ ಪಂಚಾಯ್ತಿಗೆ ಅಗಸ್ಟ್ 17ರಂದು ಚುನಾವಣೆ ಜರುಗಲಿದ್ದು, ಜೆಡಿಎಸ್ ಪಕ್ಷದ ಮೂಲ ಕಾರ್ಯಕರ್ತರು ಪಕ್ಷದಿಂದ 15 ವಾರ್ಡ್‌ಗಳಲ್ಲಿಯೂ ಸ್ಪರ್ಧಿಸಲು ಸಿದ್ದರಿದ್ದಾರೆ. ಆದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣ ಪಕ್ಷದ ವರಿಷ್ಠರ ನಿರ್ದೇಶನದಂತೆ ಚುನಾವಣೆಗೆ ಕೆಲಸ ಮಾಡಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಕುಮಾರ, ಜಿಲ್ಲಾ ಉಪಾಧ್ಯಕ್ಷ ಸತೀಶ ಮಾಳದಕರ, ಪಕ್ಷದ ಮುಖಂಡರಾದ ಬಸನಗೌಡ ಸಿದ್ದಪ್ಪಗೌಡ್ರ, ಹನುಮಂತಪ್ಪ ಬ್ಯಾಡಗಿ, ಮುಸ್ತಫಾ ದೊಡ್ಡಮನಿ, ಸಾಧಿಕ್ ಮುಲ್ಲಾ, ಸಿರಾಜ ಮುಲ್ಲಾ, ದಾದಾಪೀರ ಕೂಲಂಬಿ, ಬಸನಗೌಡ ದೊಡ್ಡಬಸಪ್ಪಳವರ, ಆರ್.ಬಿ.ಪಾಟೀಲ, ಅಲ್ತಾಪ್ ನದಾಫ್, ಚನ್ನವೀರಪ್ಪ ಬಡಿಗೇರ ಸೇರಿದಂತೆ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.