ADVERTISEMENT

ಗುತ್ತಲ | ನೆಮ್ಮದಿ ಕೇಂದ್ರದಲ್ಲಿ ಹಣ ವಸೂಲಿ: ಕರವೇ ಆರೋಪ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 14:53 IST
Last Updated 8 ಆಗಸ್ಟ್ 2023, 14:53 IST
ಗುತ್ತಲ ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ  ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪ ತಶೀಲ್ದಾರರ್‌ಗೆ ಮನವಿ ಸಲ್ಲಿಸಿದರು

ಟ್ಟಣದ ಕರವೇ ಪದಾಧಿಕಾರಿಗಳು ಉಪತಹಶೀಲ್ದಾರರಿಗೆ ಮನವಿ ನೀಡುತ್ತಿರುವದು.
ಗುತ್ತಲ ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ  ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪ ತಶೀಲ್ದಾರರ್‌ಗೆ ಮನವಿ ಸಲ್ಲಿಸಿದರು ಟ್ಟಣದ ಕರವೇ ಪದಾಧಿಕಾರಿಗಳು ಉಪತಹಶೀಲ್ದಾರರಿಗೆ ಮನವಿ ನೀಡುತ್ತಿರುವದು.   

ಗುತ್ತಲ: ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಆಧಾರ ತಿದ್ದುಪಡಿ ಸೇರಿದಂತೆ ಅರ್ಜಿ ನಮೂನೆಗಳಿಗೆ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ  ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪ ತಶೀಲ್ದಾರರ್‌ಗೆ ಮನವಿ ಸಲ್ಲಿಸಿದರು.

ಆಧಾರ ತಿದ್ದುಪಡಿಗೆ ಸರ್ಕಾರ ₹25ರಿಂದ ₹30 ನಿಗದಿಪಡಿಸಿದೆ. ಆದರೆ ನೆಮ್ಮದಿ ಕೇಂದ್ರಗಳಲ್ಲಿ ₹150ರಿಂದ ₹200 ವಸೂಲಿ ಮಾಡಲಾಗುತ್ತಿದೆ. ಇಂತಹ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಉಪತಹಶೀಲ್ದಾರ್ ಎಂ.ಡಿ.ಕಿಚಡೇರ ಮಾತನಾಡಿ, ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಅಂತಹ ಘಟನೆಗಳು ನಡೆದಿದ್ದರೂ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ, ಚನ್ನಪ್ಪ ಹೊನ್ನಮ್ಮನವರ, ದಾದಾಪೀರ ಕಾಲೆಕಾನವರ, ಗೌಸ್‌ಪಾಕ್ ಬಾಲೆಬಾಯಿ, ಬಸಣ್ಣ ಅರಳಿ, ವೀರೇಶ ಕಮ್ಮಾರ, ಮಲ್ಲಿಕಾರ್ಜುನ ಪಾಟೀಲ, ಕುಮಾರ ರಾಮಾಪೂರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.