ADVERTISEMENT

ಬಾಲಕಿ ಹೆಸರಿನಲ್ಲಿ ನಕಲಿ ಖಾತೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 15:05 IST
Last Updated 12 ಜುಲೈ 2020, 15:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾವೇರಿ: ಬಾಲಕಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಹಾಗೂ ಇ–ಮೇಲ್ ಅನ್ನು‌ ಸೃಷ್ಟಿಸಿ, ಬಾಲಕಿಯೊಂದಿಗೆ ಇರುವ ಅಸಭ್ಯ ಫೋಟೊಗಳನ್ನು ಹಂಚಿಕೊಂಡಿದ್ದ ಆರೋಪಿಯನ್ನು ಶನಿವಾರ ನಗರದ ಸಿ.ಇ.ಎನ್‌. ಕ್ರೈಂ ಪೊಲೀಸ್‌ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿ, ನಿತ್ಯ ಬಸ್‌ನಲ್ಲಿ ಶಾಲೆಗೆ ಹೋಗಿಬರುತ್ತಿದ್ದಳು. ಶಾಲೆಗೆ ಹೋಗುವಾಗ ಬಾಲಕಿಯ ಸ್ನೇಹ ಬೆಳೆಸಿದ ಯುವಕನೊಬ್ಬ, ಬಲವಂತದಿಂದ ಆಕೆಯೊಂದಿಗೆ ತೆಗೆದುಕೊಂಡ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೇ 24ರಂದು ಹರಿಬಿಟ್ಟಿದ್ದ. ಜತೆಗೆ ಬಾಲಕಿ ಹೆಸರಿನಲ್ಲಿ ಇ–ಮೇಲ್‌ ಸೃಷ್ಟಿಸಿ, ಆಕೆಯ ಸಂಬಂಧಿಕರಿಗೆ ಫೋಟೊಗಳನ್ನು ಕಳುಹಿಸಿದ್ದ.

ಈ ಬಗ್ಗೆ ಬಾಲಕಿಯ ಕುಟುಂಬದವರು ಯುವಕನನ್ನು ವಿಚಾರಿಸಿದಾಗ, ‘ನಿಮ್ಮ ಮಗಳು ಫೋನ್‌ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಹಾಗಾಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ ಎಂದು ನಮಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ’ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ನಗರದ ಸಿಇಎನ್‌ ಕ್ರೈಂ ಠಾಣೆ ಪೊಲೀಸರು ಫೋಕ್ಸೊ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.