ADVERTISEMENT

ಹಾವೇರಿ: ಮೀನು ಮಾರಾಟ; ವಾಹನ ಸೌಲಭ್ಯಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:03 IST
Last Updated 21 ನವೆಂಬರ್ 2025, 8:03 IST
   

ಹಾವೇರಿ: ಪ್ರಸಕ್ತ ಸಾಲಿನ ವಿಶೇಷ ಧರ್ತಿ ಆಭಾ ಯೋಜನೆಯಡಿ ಮೀನು ಸಾಗಾಣಿಕೆ ಮತ್ತು ಮಾರಾಟಕ್ಕಾಗಿ ಎರಡು–ಮೂರು ಚಕ್ರದ ವಾಹನ ಖರೀದಿಗೆ ಸಹಾಯಧನ ನೀಡಲು ಅರ್ಹ ಪರಿಶಿಷ್ಟ ಪಂಗಡ ಸಮುದಾಯದ ಜನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಮೀನುಗಾರಿಕೆ ಸಹಕಾರಿ ಸಂಘದ ಸದಸ್ಯರಾದ ನೋಂದಾಯಿತ ಮೀನು ಮಾರಾಟಗಾರರು ಅರ್ಜಿ ಸಲ್ಲಿಸಲು ಅವಕಾಶವಿದೆ. ಶಿಗ್ಗಾವಿ ತಾಲ್ಲೂಕಿನ ಶಿಡ್ಲಾಪುರ, ಹಾನಗಲ್ ತಾಲ್ಲೂಕಿನ ಬಾದಾಮಗಟ್ಟಿ, ಹಾವೇರಿ ತಾಲ್ಲೂಕಿನ ಗೌರಾಪುರ ಎಂ. ಆಡೂರ, ತೇರದಹಳ್ಳಿ, ಬ್ಯಾಡಗಿ ತಾಲ್ಲೂಕಿನ ದುಮ್ಮಿಹಾಳ, ಅರಬಗೊಂಡ, ಹಿರೇಕೆರೂರು ತಾಲ್ಲೂಕಿನ ಆಲದಕಟ್ಟಿ, ರಾಣೆಬೆನ್ನೂರು ತಾಲ್ಲೂಕಿನ ಯಕಲಾಸಪೂರ, ನಲವಾಗಲ, ನಾಗೇನಹಳ್ಳಿ ಹಾಗೂ ಫತ್ತೇಪೂರ ಗ್ರಾಮದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಡಿ. 18ರೊಳಗಾಗಿ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ 9886689622 ಹಾಗೂ 8095792530 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT