ADVERTISEMENT

ಪ್ರತಿಭೆ ಗುರುತಿಸಿ ರಾಷ್ಟ್ರಮಟ್ಟಕ್ಕೆ ಬೆಳೆಸಿ: ಮಾಜಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 3:47 IST
Last Updated 21 ಜುಲೈ 2025, 3:47 IST
ರಟ್ಟೀಹಳ‍್ಳಿ ಪಟ್ಟಣದಲ್ಲಿ ಭಾನುವಾರ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಕರ್ನಾಟಕ ರಾಜ್ಯ ತಂಡದ ಜ್ಯೂನಿಯರ್ ಬಾಲಕ/ಬಾಲಕಿಯರ ಖೋ-ಖೋ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಚೇರಮನ ಶಿವಯೋಗಿ ಎಲಿ. ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
ರಟ್ಟೀಹಳ‍್ಳಿ ಪಟ್ಟಣದಲ್ಲಿ ಭಾನುವಾರ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಕರ್ನಾಟಕ ರಾಜ್ಯ ತಂಡದ ಜ್ಯೂನಿಯರ್ ಬಾಲಕ/ಬಾಲಕಿಯರ ಖೋ-ಖೋ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಚೇರಮನ ಶಿವಯೋಗಿ ಎಲಿ. ಸೇರಿದಂತೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.   

ರಟ್ಟೀಹಳ್ಳಿ: ಪಟ್ಟಣದ ಕ್ರೀಡಾ ಇತಿಹಾಸ ಮೆಲುಕು ಹಾಕಿದರೆ ರಟ್ಟೀಹಳ್ಳಿ ಪಟ್ಟಣದ ಕ್ರೀಡಾಪಟುಗಳು ಕೊಕ್ಕೊ ಆಟದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಉತ್ತಮ ಕ್ರೀಡಾಪ್ರತಿಭೆ ತೋರಿದ್ದಾರೆ. ಹೀಗಾಗಿ ಇಲ್ಲಿ ನಡೆಯುವ ಕ್ರೀಡೆಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದ ಕ್ರೀಡಾಪಟುಗಳು ಉತ್ತಮ ತರಬೇತಿ ಪಡೆದು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ಗುರುತಿಸುವಂತಾಗಲಿ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಅವರು ರಟ್ಟೀಹಳ್ಳಿ ಪಟ್ಟಣದಲ್ಲಿ ಭಾನುವಾರ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಕೊಕ್ಕೊ ಸಂಸ್ಥೆ, ಹಾವೇರಿ ಜಿಲ್ಲಾ ಕೊಕ್ಕೊ ಸಂಸ್ಥೆ ಮತ್ತು ರಟ್ಟೀಹಳ್ಳಿ ಸ್ಪೂರ್ಟ್ಸ್‌ ಕ್ಲಬ್ ವತಿಯಿಂದ ಭಾನುವಾರದಿಂದ 10 ದಿನಗಳ ಕಾಲ ಆಯೋಜಿಸಲಾಗಿರುವ ರಾಜ್ಯ ತಂಡದ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ಕೊಕ್ಕೊ ತರಬೇತಿ ಶಿಬಿರದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತರಬೇತಿ ಶಿಬಿರ ಉದ್ಘಾಟನೆ ಮಾಡಿದ ಕರ್ನಾಟಕ ರಾಜ್ಯ ಕೊಕ್ಕೊ ಸಂಸ್ಥೆಯ ಚೇರಮನ್ ಶಿವಯೋಗಿ.ಎಸ್.ಎಲಿ. ಮಾತನಾಡಿ, ರಟ್ಟೀಹಳ್ಳಿ ಪಟ್ಟಣವು ಮೊದಲಿನಿಂದಲೂ ಕೊಕ್ಕೊ ಆಟಕ್ಕೆ ಅತ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಮಟ್ಟದ ಕೊಕ್ಕೊ ಆಟದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಹೀಗಾಗಿ ಈ ನೆಲೆದಲ್ಲಿ ತಾವು ತರಬೇತಿ ಪಡೆಯುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ, ಇಲ್ಲಿನ ನಿವಾಸಿಗಳು, ಜನಪ್ರತಿನಿಧಿಗಳು ಆಟಕ್ಕೆ ಹೆಚ್ಚು ಪ್ರೋತ್ಸಾಹನೀಡುತ್ತಾ ಬಂದಿದ್ದಾರೆ ಎಂದರು.

ADVERTISEMENT

ಶಂಭಣ್ಣ ಗೂಳಪ್ಪನವರ, ಆರ್.ಎನ್.ಗಂಗೋಳ, ಫಾಲಾಕ್ಷಗೌಡ ಪಾಟೀಲ, ರವಿ ಹದಡೇರ, ಮಾಲತೇಶ ಬೆಳಕೇರಿ, ವೀರನಗೌಡ ಮಕರಿ, ನಾಗನಗೌಡ ಕೋಣ್ತಿ, ಮುತ್ತು ಬೆಣ್ಣಿ, ಸುರೇಶ ನಾಯ್ಕ್, ಶಿವಕುಮಾರ ಉಪ್ಪಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.