ಶಿಗ್ಗಾವಿ: ‘ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಕಡಿವಾಣ ಹಾಕಿರುವುದು ಸರಿಯಲ್ಲ. ಡಿಜೆ ಇಲ್ಲದೆ ಗಣೇಶ ಮೂರ್ತಿ ವಿಸರ್ಜನೆ ಮಾಡುವುದಿಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಮುಖಂಡ ಎಂ.ಎನ್.ಹೊನ್ನಕೇರಿ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಹಿಂದೂ ಮಹಾಗಣಪತಿ ಮಹಾಮಂಟಪದಲ್ಲಿ ಗುರುವಾರ ನಡೆದ ಗಣೇಶ ಮಂಡಳಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
‘ಗಣೇಶೋತ್ಸವವನ್ನು ಜಿಲ್ಲಾಡಳಿತದ ಆದೇಶಕ್ಕೆ ಮಣಿದು ಆಚರಿಸುವಂತಾಗಿದೆ. ಸಭೆಯ ನಿರ್ಧಾರವನ್ನು ಹಿಂಪಡೆಯಲಾಗದು’ ಎಂದರು.
ಸೋಮಶೇಖರಯ್ಯ ಗೌರಿಮಠ ಮಾತನಾಡಿ, ‘ಗಣೇಶ ಮಹಾಮಂಡಳದ ಪದಾಧಿಕಾರಿಗಳ ಬೇಡಿಕೆಗೆ ಸ್ಪಂದಿಸಿ ಡಿಜೆ ಬಳಕೆಗೆ ಅವಕಾಶ ಕಲ್ಪಿಸಬೇಕು. ಅದರಿಂದ ಯಾರಿಗೂ ತೊಂದರೆ ಆಗದು’ ಎಂದು ಹೇಳಿದರು.
ಗಂಗಾಧರ ಶೆಟ್ಟರ, ಕಿರಣ ಸಕ್ರಿ, ಗುಡ್ಡಪ್ಪ ಮತ್ತೂರ, ಶಿವಾನಂದ ದೇವಸೂರ, ಮಣಕಂಠ ಕಟಗಿಮಠ, ಮಂಜು ಈರಪ್ಪನವರ, ಮಧು ಜಂಗಳಿ, ಹರೀಶ ಭವಾನಿ, ಅಪ್ಪು ಪಾಟೀಲ, ಆನಂದ ಆಲದಕಟ್ಟಿ, ಶಿವು ಬುದ್ದಪ್ಪನವರ, ರಾಜು ಕುರಬಗೊಂಡ ಶಿವಾಜಿ ರಾಮಾಪುರ, ಮಾರುತಿ ಕೊಲ್ಲಾಪುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.