ADVERTISEMENT

ಕ್ರಮಕ್ಕೆ ಅಧ್ಯಕ್ಷೆ, ಉಪಾಧ್ಯಕ್ಷೆ ಆಗ್ರಹ

ಪಿಡಿಒ ಸರ್ವಾಧಿಕಾರಿ ಧೋರಣೆ ಆರೋಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:17 IST
Last Updated 4 ಡಿಸೆಂಬರ್ 2021, 2:17 IST
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯಿತಿ ಪಿಡಿಒ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಗೋಡ ಗ್ರಾಮದ ಮಮತಾ ಸುರೇಶ ಕಮದೋಡ, ಉಪಾಧ್ಯಕ್ಷೆ ನೇತ್ರಾ ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಇಒ ಟಿ.ಕೆ. ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯಿತಿ ಪಿಡಿಒ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಗೋಡ ಗ್ರಾಮದ ಮಮತಾ ಸುರೇಶ ಕಮದೋಡ, ಉಪಾಧ್ಯಕ್ಷೆ ನೇತ್ರಾ ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಇಒ ಟಿ.ಕೆ. ಮಲ್ಲಾಡದ ಅವರಿಗೆ ಮನವಿ ಸಲ್ಲಿಸಿದರು   

ರಾಣೆಬೆನ್ನೂರು: ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯಿತಿ ಪಿಡಿಒ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಗೋಡ ಗ್ರಾಮದ ಮಮತಾ ಸುರೇಶ ಕಮದೋಡ, ಉಪಾಧ್ಯಕ್ಷೆ ನೇತ್ರಾ ಹಾಗೂ ರೈತ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ಹನುಮಂತ ಕಬ್ಬಾರ ಮಾತನಾಡಿ, ಇಟಗಿ ಗ್ರಾ.ಪಂ ಪಿಡಿಒ ಸಾವಿತ್ರ ಬಿರೇಶ ಅಮ್ಮನವರ ಗ್ರಾ.ಪಂ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಕಡೆಗಾಣಿಸಿ ಸರ್ವಾಧಿಕಾರ ನಡೆಸುತ್ತಿದ್ದಾರೆ. ಯಾವುದೇ ವಿಷಯಗಳನ್ನು ತಿಳಿಸಿದೇ ಸ್ವಂತ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ದೂರಿದರು.

ಅಧ್ಯಕ್ಷರ ಗಮನಕ್ಕೆ ತರದೆ ಬೇಕಾಬಿಟ್ಟಿ ಚೆಕ್‌ ಬರೆದು ಅಧ್ಯಕ್ಷರಿಗೆ ಸಹಿ ಮಾಡಲು ಕಳಿಸುವುದು. ಎನ್‌ಆರ್‌ಇಜಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಕಳೆದ 5 ವರ್ಷಗಳಿಂದ ಮೋಟರ್‌ ರಿವೈಂಡಿಂಗ್‌, ವರ್ಕಾಶಾಪ್‌, ಬೀದಿ ದೀಪ, ಅಂಗಡಿ ಮಾಲೀಕರಿಗೆ ಹಣ ನೀಡಿಲ್ಲ. ಮಧ್ಯಾಹ್ನ 12 ಗಂಟೆಗೆ ಬಂದು 3 ಗಂಟೆಗೆ ಹೋಗುತ್ತಾರೆ. ಇದರಿಂದ ಸಾರ್ವಜನಿಕರು ಇವರನ್ನು ಕಂಡು ಸಮಸ್ಯೆ ಹೇಳಿಕೊಳ್ಳಲು ತೊಂದರೆಯಾಗಿದೆ ಎಂದು ದೂರಿದರು.

ADVERTISEMENT

ಸಾಮಾನ್ಯ ಸಭೆಯಲ್ಲಿ ಪಾಸಾದ ತೀರ್ಮಾನಗಳನ್ನು ಇದುವರೆಗೂ ಅನುಷ್ಠಾನಗೊಳಿಸಿಲ್ಲ. ಮಣಕೂರು ಗ್ರಾಮದಲ್ಲಿ ಕಳೆದ 8- 10 ದಿನಗಳಿಂದ ಕುಡಿಯುವ ನೀರಿನ ತೊಂದರೆಯಾಗಿದೆ. ಇದುವರೆಗೂ ಸರಿಪಿಡಿಸಿಲ್ಲ ಎಂದು ದೂರಿದರು. ನಿರ್ಲಕ್ಷ್ಯತನ ತೋರುವ ಅಧಿಕಾರಿಯ ಮೇಲೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದೇ 9 ರಂದು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಗೋಡ ಗ್ರಾಮದ ಮಮತಾ ಸುರೇಶ ಕಮದೋಡ, ಉಪಾಧ್ಯಕ್ಷೆ ನೇತ್ರಾ ಹಾಗೂ ನಾಗಪ್ಪ, ಅಡಿವೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.