ADVERTISEMENT

ಗುತ್ತಲ | 'ಪೋಲಾಗುತ್ತಿದ್ದ ನೀರು ತಡೆದು ವಾಲ್‌ ಜೋಡಣೆ'

ಚರಂಡಿಗೆ ಸೇರುತ್ತಿರುವ ಕುಡಿಯುವ ನೀರಿನ ವರದಿಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 2:20 IST
Last Updated 16 ಡಿಸೆಂಬರ್ 2025, 2:20 IST
ಗುತ್ತಲ ಪಟ್ಟಣದ ಹಾವೇರಿ ರಸ್ತೆಯ ಪಕ್ಕದ 16ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ನಳಗಳಿಗೆ ವಾಲ್ ಜೋಡಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ
ಗುತ್ತಲ ಪಟ್ಟಣದ ಹಾವೇರಿ ರಸ್ತೆಯ ಪಕ್ಕದ 16ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ನಳಗಳಿಗೆ ವಾಲ್ ಜೋಡಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ   

ಗುತ್ತಲ: ಕುಡಿಯುವ ನೀರು ಚರಂಡಿ ಪಾಲು ಎಂಬ ಶಿರ್ಷಿಕೆಯಡಿ ಪ್ರಜಾವಾಣಿ ಸೋಮವಾರ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯತಿ ಸಿಬ್ಬಂದಿ ನಿರಂತರವಾಗಿ ಚರಂಡಿ ಪಾಲಾಗುತ್ತಿರುವ ನೀರಿನ ನಳಗಳಿಗೆ ಸೋಮವಾರ ವಾಲ್‌ಗಳನ್ನು ಹಾಕಿ ಚರಂಡಿಗೆ ಹೋಗುವ ನೀರಿಗೆ ತಡೆ ನೀಡಿದರು.

16ನೇ ವಾರ್ಡಿನಲ್ಲಿ ಕುಡಿಯುವ ನೀರು ನಿರಂತರವಾಗಿ ಚರಂಡಿ ಪಾಲಾಗುತ್ತಿರುವ ಹಿನ್ನಲೆಯಲ್ಲಿ ಆ ವಾರ್ಡಿನ ನಿವಾಸಿಗಳು ನೀರಿನ ನಳಗಳಿಗೆ ವಾಲ್ ಜೋಡಿಸಲು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿಸದ ಪಟ್ಟಣ ಪಂಚಾಯತಿ ಅಧಿಕಾರಿ ವಿರುದ್ದ ವಾರ್ಡಿನ ನಿವಾಸಿಗಳು ಅಳಲು ಕೂಡಾ ತೋಡಿಕೊಂಡಿದ್ದರು,

ಈಗ ದುರಸ್ತಿ ಭಾಗ್ಯ ಕಂಡಿದ್ದು, ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.