ADVERTISEMENT

ಹಡಪದ ಅಪ್ಪಣ್ಣ ಜಯಂತಿ| ವಚನಗಳ ಮೂಲಕ ಸಮಾಜ ಸುಧಾರಣೆ: ಪಿಡಿಒ ವಿಶ್ವನಾಥ ಮುದಿಗೌಡ್ರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:10 IST
Last Updated 11 ಜುಲೈ 2025, 4:10 IST
ತಿಳವಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ಹಡಪದ ಸಮಾಜ ವತಿಯಿಂದ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು 
ತಿಳವಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ಹಡಪದ ಸಮಾಜ ವತಿಯಿಂದ ಗುರುವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು    

ತಿಳವಳ್ಳಿ: ‘ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಮುದಿಗೌಡ್ರ ಹೇಳಿದರು.

ಇಲ್ಲಿಯ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಹಡಪದ ಅಪ್ಪಣ್ಣ ಅವರ ವಚನಗಳು ಬಸವಣ್ಣನವರ ಮೇಲಿನ ಗೌರವ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ತಮ್ಮ ಜೀವನದುದ್ದಕ್ಕೂ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ವಚನಗಳ ಮೂಲಕ ಶ್ರಮಿಸಿದ್ದಾರೆ’ ಎಂದರು.

ADVERTISEMENT

ಹಡಪದ ಸಮಾಜದ ಅಧ್ಯಕ್ಷ ಅಶೋಕ ಕೆಲ್ಸೆರ್ ಮಾತನಾಡಿ, ‘ಹಡಪದ ಅಪ್ಪಣ್ಣನವರು ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್‌ ಶರಣ. ಅನುಭವ ಮಂಟಪದಲ್ಲಿ ಬಸವಣ್ಣನವರ ಕಾ‍ರ್ಯಗಳಿಗೆ ಬೆನ್ನೆಲುಬಾಗಿ ನಿಂತು ಮಾದರಿಯಾಗಿದ್ದಾರೆ. ವೃತ್ತಿ ಕಾಯಕದೊಂದಿಗೆ ವಚನ ರಚನೆ ಹಾಗೂ ಸಮಾಜ ಸೇವೆಯ ಪ್ರವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದರು.

ಹಡಪದ ಸಮಾಜದ ಉಪಾಧ್ಯಕ್ಷ ಉಮೇಶ ಹಡಪದ, ಕಾರ್ಯದರ್ಶಿ ಮಂಜುನಾಥ ಕಾಯಕದ, ರವಿ ಸಪ್ಪಕಾಳೆ, ಶಿವಲಿಂಗಪ್ಪ ಹಡಪದ, ಚಿದಾನಂದ ಹಡಪದ, ತಿಪ್ಪಣ್ಣ ನವಲಗುಂದ, ಮಾಲತೇಶ ಹಡಪದ, ರಾಜು ಚಿಕ್ಕಳ್ಳಿ, ಕರಿಬಸವ ದುಮ್ಮಿಹಾಳ, ಉಸ್ಮಾನಅಲಿ ಚಿತ್ತೇಖಾನ, ಕರಿಬಸವ ದುಮ್ಮಿಹಾಳ, ಸಂಜೀವ ದೊಡ್ಡಮನಿ, ಮಂಜುನಾಥ ಓಲೇಕಾರ, ರೇಣುಕಾ ಹುಳ್ಳೇರ, ರಮೇಶ ಹರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.