ADVERTISEMENT

ರೈತ ಕುಟುಂಬಗಳಿಂದ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 15:39 IST
Last Updated 19 ಜುಲೈ 2023, 15:39 IST
ಹಾನಗಲ್‌ನಲ್ಲಿ ಬುಧವಾರ ರೈತ ಸಂಘದ ಪ್ರತಿಭಟನೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬದವರ ಭಾಗವಹಿಸಿದ್ದರು.
ಹಾನಗಲ್‌ನಲ್ಲಿ ಬುಧವಾರ ರೈತ ಸಂಘದ ಪ್ರತಿಭಟನೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಕುಟುಂಬದವರ ಭಾಗವಹಿಸಿದ್ದರು.   

ಹಾನಗಲ್: ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ರೈತ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ
ಬುಧವಾರ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ತಾಲ್ಲೂಕಿನಲ್ಲಿ ಈ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರು ಭಾಗವಹಿಸಿದ್ದರು. ಮೃತರ ಭಾವಚಿತ್ರ ಇಟ್ಟುಕೊಂಡು ಪ್ರತಿಭಟಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಈ ವರ್ಷದಲ್ಲಿ ತಾಲ್ಲೂಕಿನಲ್ಲಿ ಒಟ್ಟು 9 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಎರಡು ತಿಂಗಳ ಅವಧಿಯಲ್ಲಿ 3 ಆತ್ಮಹತ್ಯೆ ನಡೆದಿವೆ. ಪ್ರಕೃತಿ ವೈಪರಿತ್ಯದ ಕಾರಣಕ್ಕಾಗಿ ಬೆಳೆ ಹಾನಿ ಅನುಭವಿಸಿ ಸಾಲದಲ್ಲಿ ಸಿಲುಕಿರುವ ರೈತರಿಗೆ ಬ್ಯಾಂಕ್‌ಗಳು ಕಿರುಕುಳ ನೀಡಬಾರದು ಎಂದು ಆಗ್ರಹಿಸಿದರು.

ADVERTISEMENT

ರೈತ ಸಂಘದ ಪ್ರಮುಖರಾದ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಎಂ.ಎಂ.ಬಡಗಿ, ಶಣ್ಮುಖ ಅಂದಲಗಿ, ಶಿವಕುಮಾರ ಹಣ್ಣಿ, ವೀರೇಶ ಬಾಳಂಬೀಡ, ಜಗದೀಶ ಬಂಗಿ, ಮೂಖಯ್ಯ ಗುರುಲಿಂಗಮ್ಮನವರ ಅಜ್ಜನಗೌಡ ಕರೆಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.