ADVERTISEMENT

ಹಾನಗಲ್‌ ಸಾಮೂಹಿಕ ಅತ್ಯಾಚಾರ: 873 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

19 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:09 IST
Last Updated 8 ಮಾರ್ಚ್ 2024, 16:09 IST

ಹಾವೇರಿ: ಹಾನಗಲ್‌ನ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ಎರಡು ತಿಂಗಳ ಬಳಿಕ 19 ಆರೋಪಿಗಳ ವಿರುದ್ಧ ಹಾವೇರಿ ಜಿಲ್ಲಾ ಪೊಲೀಸರು 873 ಪುಟಗಳ ದೋಷಾರೋಪ ಪಟ್ಟಿಯನ್ನು ಹಾನಗಲ್‌ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಶಿರಸಿಯ ಮಹಿಳೆ ಮೇಲೆ ಅತ್ಯಾಚಾರ ಕೃತ್ಯ ಎಸಗಿದ್ದ ಅಕ್ಕಿಆಲೂರಿನ ಪ್ರಮುಖ 7 ಆರೋಪಿಗಳು ಮತ್ತು ಕೃತ್ಯಕ್ಕೆ ಸಹಕರಿಸಿದ್ದ 12 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಸಾಮೂಹಿಕ ಅತ್ಯಾಚಾರ, ಜೀವ ಬೆದರಿಕೆ, ಮಾನಭಂಗ, ಅಪಹರಣ, ಕೊಲೆ ಯತ್ನ, ಗಲಭೆ, ಶಾಂತಿಭಂಗ ಸೇರಿ ಐಪಿಸಿಯ ಇತರ ಕಲಂಗಳ ಉಲ್ಲೇಖ ದೋಷಾರೋಪ ಪಟ್ಟಿಯಲ್ಲಿದೆ.

ವೈದ್ಯರು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಘಟನೆ ಕಂಡ ಸ್ಥಳೀಯರು, ಹೋಟೆಲ್‌ ಸಿಬ್ಬಂದಿ ಇತರರು ಸೇರಿ 87 ಸಾಕ್ಷಿಗಳನ್ನು ನಮೂದಿಸಲಾಗಿದೆ. 19 ಆರೋಪಿಗಳ ಪೈಕಿ 6 ಮಂದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. 

ADVERTISEMENT

‘ತನಿಖೆಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸಿ, 19 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದೇವೆ’ ಎಂದು ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತನಿಖಾಧಿಕಾರಿ ಸಿ.ಗೋಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.