ADVERTISEMENT

ಹಾನಗಲ್: ಕಾಶ್ಮೀರಿ ದರ್ಗಾ ಉರುಸ್‌ ಆರಂಭ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 6:57 IST
Last Updated 31 ಜುಲೈ 2025, 6:57 IST
ಹಾನಗಲ್‌ನಲ್ಲಿ ಹಜರತ್ ಪೀರ್ ಸೈಯ್ಯದ್ ಮಕ್ಬೂಲ್ ಷಾ ಖಾದ್ರಿ ಗುರುಗಳ (ಕಾಶ್ಮೀರಿ) ಉರುಸ್ ಏ ಖಾದ್ರಿ ಮಕ್ಬೂಲಿಯಾ ಅಂಗವಾಗಿ ಶಾಸಕ ಶ್ರೀನಿವಾಸ ಮಾನೆ ಚಾದರ್ ಸಮರ್ಪಿಸಿದರು
ಹಾನಗಲ್‌ನಲ್ಲಿ ಹಜರತ್ ಪೀರ್ ಸೈಯ್ಯದ್ ಮಕ್ಬೂಲ್ ಷಾ ಖಾದ್ರಿ ಗುರುಗಳ (ಕಾಶ್ಮೀರಿ) ಉರುಸ್ ಏ ಖಾದ್ರಿ ಮಕ್ಬೂಲಿಯಾ ಅಂಗವಾಗಿ ಶಾಸಕ ಶ್ರೀನಿವಾಸ ಮಾನೆ ಚಾದರ್ ಸಮರ್ಪಿಸಿದರು   

ಹಾನಗಲ್: ಪಟ್ಟಣದಲ್ಲಿ ಹಜರತ್ ಪೀರ್ ಸೈಯ್ಯದ್ ಮಕ್ಬೂಲ್ಅಹ್ಮದ್ ಷಾ ಖಾದ್ರಿ ಗುರುಗಳ (ಕಾಶ್ಮೀರಿ) 57ನೇ ಉರುಸ್ ಏ ಖಾದ್ರಿ ಮಕ್ಬೂಲಿಯಾ ಮಂಗಳವಾರ ಸಂಜೆಯಿಂದ ಆರಂಭಗೊಂಡಿದ್ದು, ಶಾಸಕ ಶ್ರೀನಿವಾಸ ಮಾನೆ ಚಾದರ್ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ‘ಜಾತ್ರೆ, ಉರುಸ್ ಆಚರಿಸುವುದರಿಂದ ಸಾಮರಸ್ಯ, ಸದ್ಭಾವನೆ ಮೂಡಲಿದೆ. ನಮ್ಮದು ಸಂತರು, ಶರಣರು, ಸೂಫಿಗಳ ನಾಡು, ಭಾವೈಕ್ಯದ ಬೀಡು. ಪ್ರತಿಯೊಬ್ಬರೂ ಈ ಮಣ್ಣಿನ ಇತಿಹಾಸಕ್ಕೆ ಗೌರವ ತರುವಂತೆ ಉತ್ತಮ ಬದುಕು ಸಾಗಿಸಬೇಕಿದೆ’ ಎಂದು ಶಾಸಕ ಮಾನೆ ಹೇಳಿದರು.

ಉರುಸ್ ಕಮಿಟಿ ಅಧ್ಯಕ್ಷ ಬಷೀರ್ ಸರ್ವಿಕೇರಿ, ಪ್ರಮುಖರಾದ ದುದ್ದುಸಾಬ ಅಕ್ಕಿವಳ್ಳಿ, ಮುಕ್ತಿಯಾರ್ ಖೇಣಿ, ಸಿಕಂದರ್ ವಾಲಿಕಾರ, ಎಂ.ಜಿ.ಪಠಾಣ, ಜಾಫರ್ ಬಾಳೂರ, ಶಾರಿಕ್ ಕಿಲ್ಲೇದಾರ, ನಿಸಾರ ಗೌಂಡಿ, ಬಾಬಾಜಾನ ಕೊಂಡವಾಡಿ, ಚಮನಸಾಬ ಕಿತ್ತೂರ, ಯಲ್ಲಪ್ಪ ಕಿತ್ತೂರ, ನಾಸೀರ್ ಖಾಜಿ, ಗೌಸ್‌ಮೊದೀನ್ ಮುಜಾವರ, ಇರ್ಫಾನ್ ಮಿಠಾಯಿಗಾರ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.